ಸದ್ಯಕ್ಕೆ ಕೊಡಗಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ - ಡಿಸಿ.
ಬುಧವಾರ, 12 ಜನವರಿ 2022 (21:44 IST)
ಕೊಡಗಿನಲ್ಲಿ ಸದ್ಯಕ್ಕೆ ಕೋವಿಡ್ ಪಾಸಿಟಿವಿಟಿ ದರ ಶೇಕಡಾ 5 ರ ಒಳಗೆ ಇದೆ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಯ ಪ್ರಮಾಣ ದಿನಕ್ಕೆ 3,200 ಕ್ಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಪಾಸಿಟಿವಿಟಿ ಪ್ರಮಾಣದಲ್ಲಿ ಏರಿಳಿತ ಉಂಟಾಗುತ್ತಿದೆ.
ಸದ್ಯಕ್ಕೆ ಶಾಲಾ-ಕಾಲೇಜ್ ಬಂದ್ ಮಾಡಲು ಉದ್ದೇಶ ಇಲ್ಲ.
ಶಬರಿಮಲೆಗೆ ತೆರಳಿ ಕೊಡಗಿಗೆ ವಾಪಸ್ ಆಗುವ ಅಯ್ಯಪ್ಪ ಭಕ್ತರು ಏಳು ದಿನ ಹೋಂ ಕೊರಂಟೈನ್ ನಲ್ಲಿ ಇರಬೇಕು .
ಭಕ್ತರಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಕೂಡಲೇ ಚಿಕಿತ್ಸೆಗೆ ಒಳಗಾಗಬೇಕು. ಅವರ ಪ್ರಾರ್ಥಮಿಕ ಸಂಪರ್ಕ ಹೊಂದಿದ್ದವರು ಕೂಡ ಪರೀಕ್ಷೆಗೆ ಒಳಗಾಗಬೇಕು.