ನಿತ್ಯ ಕಿರುಕುಳ ಕೊಡುತ್ತಿರುವುದನ್ನು ಪ್ರಶ್ನಿಸಿದ ಮಾವನನ್ನೇ ಕೊಲೆಗೈದ ಅಳಿಯ!

ಶುಕ್ರವಾರ, 18 ಆಗಸ್ಟ್ 2023 (07:33 IST)
ಕೋಲಾರ: ಆತ ತನ್ನ ಕೊನೆಯ ಮಗಳು ಎಂದು ಪ್ರೀತಿಯಿಂದ ಸಾಕಿ ಸಲಹಿ ಶಕ್ತಿ ಮೀರಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಆತ ತನ್ನ ಮಗಳಿಗೆ ಮಾಡಿದ್ದ ಮದುವೆಯೇ ಆತನಿಗೆ ಮರಣ ಶಾಸನವಾಗಿ ಮಾರ್ಪಾಟಾಗಿತ್ತು. ಮದುವೆ ಮಾಡಿದ ಕೇವಲ 40 ದಿನಕ್ಕೆ ತನ್ನ ಮಗಳು ಗಂಡನ ಮನೆ ಬಿಟ್ಟು ಬಂದರೆ, ಅತ್ತ ಆ ತಂದೆ ತನ್ನ ಅಳಿಯನ ಕೈಯಿಂದಲೇ ಕೊಲೆಯಾಗಿದ್ದಾನೆ.
 
ಕೋಲಾರದ ಷಹೀದ್ ನಗರ ನಿವಾಸಿ ಬಾಬು ಷರೀಫ್ನನ್ನು ಅಳಿಯನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. 40 ದಿನಗಳ ಹಿಂದೆ ಮಗಳು ಖಾನಂಳನ್ನು ತಬರೇಜ್ ಪಾಷಾಗೆ ಕೊಟ್ಟು ಮದುವೆ ಮಾಡಿದ್ರು. ತನ್ನ ಕೊನೆಯ ಮಗಳು ಎಂದು ಬಾಬು ಷರೀಫ್ ಸುಮಾರು 20 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಕೇಳಿದಷ್ಟು ಒಡವೆ, ಹುಡುಗನಿಗೊಂದು ಬೈಕ್ ಎಲ್ಲವನ್ನೂ ಕೊಟ್ಟು ಮದುವೆ ಮಾಡಿದ್ರು.

ಮದುವೆಯಾದ ಎರಡೇ ದಿನಕ್ಕೆ ತಬರೇಜ್ ಪಾಷಾ ಸಾನಿಯಾ ಖಾನಂಗೆ ಕಿರುಕುಳ ನೀಡಲು ಶುರು ಮಾಡಿಕೊಂಡಿದ್ದ. ನಿಮ್ಮಪ್ಪ ಕೋಟಿ ಕೋಟಿ ಕೊಟ್ಟು ಮದುವೆ ಮಾಡಿ ಕೊಟ್ಟಿಲ್ಲ ಮನೆಯಲ್ಲಿ ನಾನು ಹೇಳಿದಂತೆ ಕೇಳಿಕೊಂಡು ಮನೆ ಕೆಲಸ ಮಾಡಿಕೊಂಡಿರಬೇಕು ಎಂದು ತಾಕೀತು ಮಾಡುತ್ತಿದ್ದ. ಹೊಡೆಯೋದು ಬಡಿಯೋದು, ಗ್ಯಾಸ್ ಆನ್ ಮಾಡಿ ಬ್ಲಾಸ್ಟ್ ಮಾಡಿ ಸಾಯಿಸಿಬಿಡ್ತೀನಿ ಎಂದೆಲ್ಲಾ ಕಿರುಕುಳ ನೀಡಲು ಆರಂಭಿಸಿದ್ದ.

ಇದನ್ನು ಸಹಿಸಿಕೊಳ್ಳಲಾಗದೆ ಆಗಸ್ಟ್ 11 ರಂದು ಸಾನಿಯಾ ತವರು ಮನೆಗೆ ವಾಪಸ್ ಬಂದಿದ್ದಳು. ಅಷ್ಟಕ್ಕೆ ಸುಮ್ಮನಾಗದ ತಬರೇಜ್ ಸಾನಿಯಾ ಫೋನ್ಗೆ ಮೆಸೇಜ್ ಮಾಡಿ ನಿನ್ನ ಬಿಡೋದಿಲ್ಲ ನಿಮ್ಮ ಅಪ್ಪನನ್ನು ಸಾಯಿಸ್ತೀನಿ ಎಂದೆಲ್ಲಾ ಧಮ್ಕಿ ಹಾಕುತ್ತಿದ್ದನಂತೆ.

ಕಳೆದ ರಾತ್ರಿ ಕೂಡಾ ಮೆಸೇಜ್ ಮಾಡಿ ಬೆದರಿಕೆ ಹಾಕಿದ್ದಾನೆ. ವಿಷಯ ತಿಳಿದ ಷರೀಫ್ ಕೇಳೋದಕ್ಕೆಂದು ತಬರೇಜ್ ಮನೆಗೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ ತಬರೇಜ್ ಹಾಗೂ ಆತನ ತಾಯಿ ಜಬೀನಾ ತಾಜ್ ಬಾಬು ಷರೀಫ್ಗೆ ಚಾಕುವಿನಿಂದ ಇರಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ