ಜೋಡೆತ್ತು ಪ್ರಮಾಣವಚನಕ್ಕೆ ಕಂಠೀರವದಲ್ಲಿ ವೇದಿಕೆ ಸಜ್ಜು..!
ಶುಕ್ರವಾರ, 19 ಮೇ 2023 (19:09 IST)
ಸಿದ್ದರಾಮಯ್ಯ ಎಂಬ ನಾನು ಅಂತಾ ಸಿಗ್ಬೇಚರ್ ಡೈಲಾಗ್ ಹೇಳಿ ಅಧಿಕೃತವಾಗಿ ಸಿದ್ದರಾಮಯ್ಯ ಸಿಎಂ ಆಗೋಕೆ ಕ್ಷಣಗಣನೆ ಶುರುವಾಗಿದೆ.. ಕಂಠೀರವ ಸ್ಟೇಡಿಯಂ ನಲ್ಲಿ ಜೋಡೆತ್ತು ಪ್ರಮಾಣ ವಚನಕ್ಕೆ ವೇದಿಕೆ ಸಜ್ಜಾಗಿದೆ.. ಈ ನಡುವೆ ನಾಳೆ ನಡೀತಿರೋ ಬೃಹತ್ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಕೂಡ ಬಂದೋಬಸ್ತ್ ಮತ್ತೆ ಟ್ರಾಫಿಕ್ ಕಂಟ್ರೋಲ್ ಗೆ ಬಿಗ್ ಪ್ಲಾನ್ ಮಾಡಿಕೊಂಡಿದೆ.
ನಿಯೋಜಿತ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಮುಖ್ಯಮಂತ್ರಿ ಗಾದಿಗೆ ಏರೋಕೆ ಕ್ಷಣಗಣನೆ ಶುರುವಾಗಿದೆ.. ನಾಳೆ ಕಂಠೀರವ ಸ್ಟೇಡಿಯಂನಲ್ಲಿ ಜೋಡೆತ್ತುಗಳು ಸಿಎಂ, ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.. ನಾಳೆ ಮಧ್ಯಾಹ್ನ 12.30ಕ್ಕೆ ಶುರುವಾಗೋ ಕಾರ್ಯಕ್ರಮಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.
ನಾಳೆ ನಡೀತಿರೋ ಸಿಎಂ ಡಿಸಿಎಂ ಪದಗ್ರಹಣ ಕಾರ್ಯಕ್ರಮದಲ್ಲಿ ಕೇಂದ್ರದ ಘಟಾನುಘಟಿ ನಾಯಕರೇ ಭಾಗಿಯಾಗಲಿದ್ದಾರೆ.. ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಜರಾಗಲಿದ್ದಾರೆ.. ಇನ್ನು ಬೇರೆ ಬೇರೆ ರಾಜ್ಯದ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಿದ್ದು, ವೆಸ್ಟ್ ಬೆಂಗಾಳ್, ರಾಜಸ್ಥಾನ್, ಪಾಂಡಿಚೆರಿ, ತಮಿಳುನಾಡು, ಸೇರಿದಂತೆ ಒಂಭತ್ತು ರಾಜ್ಯಗಳ ಸಿಎಂಗಳು ಹಾಜರಿರಲಿದ್ದು ಬೇರೆ ಬೇರೆ ರಾಜ್ಯಗಳ ಸಿಎಂಗಳ ಜೊತೆ ಕಾಂಗ್ರೆಸ್ ಬೃಹತ್ ಕಾರ್ಯಕ್ರಮದಲ್ಲಿ ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡಲಿದೆ.. ಬರ್ತಿರೋ ಎಲ್ಲಾ ವಿವಿಐಪಿಗಳಿಗೂ ಹೈ ಸೆಕ್ಯೂರಿಟಿ ವ್ಯವಸ್ಥೆ ಇರಲಿದ್ದು ಸೋನಿಯಾ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿಗೆ Z+ ಜೊತೆಗೆ CRPF, ASLಭದ್ರತೆ ಇರಲಿದ್ದು, ಬೇರೆ ರಾಜ್ಯಗಳ ಸಿಎಂಗಳಿಗೆ Z+ ಮತ್ತು Z ಕೆಟಗರಿ ಸೆಕ್ಯೂರಿಟಿ ಇರಲಿದೆ.
ಈ ಕಾರ್ಯಕ್ರಮದ ಮೂಲಕ ಕೂಡ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಪ್ಲಾನ್ ಮಾಡಿಕೊಂಡಿರೋ ಡಿಕೆ ಶಿವಕುಮಾರ್ ಜನಗಳಿಗೆ ಅಭಿನಂದನಾ ಕಾರ್ಯಕ್ರಮ ಅಂತಾ ಮುಂದೆ ನಿಂತು ಸಿದ್ಧತೆ ಪರಿಶೀಲನೆ ಮಾಡಿದ್ರು.. ಕಂಠೀರವ ಸ್ಟೇಡಿಯಂ ನಲ್ಲಿ ಸ್ಟೇಜ್, ವಿವಿಐಪಿಗಳ ಆಸನ, ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸಲಹೆ, ಸೂಚನೆ ಕೊಟ್ರು.. ಅಲ್ಲದೇ ನೋಡೋಕೆ ಬರೋ ಜನಗಳಿಗೆ ಆಹ್ವಾನಕ್ಕೋಸ್ಕರ ಕಾಯ್ಬೇಡಿ ಕಾರ್ಯಕ್ರಮಕ್ಕೆ ಎಲ್ಲರೂ ಬನ್ನಿ ಅಂದ್ರು.ಗಣ್ಯ ಮತ್ತು ಅತಿಗಣ್ಯರು ಭಾಗವಹಿಸೋ ಕಾರ್ಯಕ್ರಮಕ್ಕೆ ಬೆಂಗಳೂರು ಪ್ರಭಾರ ಆಯುಕ್ತ ಎಂಎ ಸಲೀಂ ನೇತೃತ್ವದಲ್ಲಿ ಈಗಾಗಲೇ ಬಂದೋಬಸ್ತ್ ಗೆ ಪ್ಲಾನ್ ಮಾಡಿಕೊಳ್ಳಲಾಗಿದೆ.. ಎಂಟು ಡಿಸಿಪಿಗಳ ನೇತೃತ್ವದಲ್ಲಿ ಸುಮಾರು ಒಂದು ಸಾವಿರದ ಐನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ.. ಸ್ಟೇಡಿಯಂ ನ ಎಂಟೂ ಗೇಟ್ ಗಳಿಗೂ ಓರ್ವ ಎಸಿಪಿ ರ್ಯಾಂಕಿಂಗ್ ಅಧಿಕಾರಿ, ಇನ್ಸ್ಪೆಕ್ಟರ್ ರ್ಯಾಂಕಿಂಗ್ ಅಧಿಕಾರಿ ನೇತೃತ್ವದಲ್ಲಿ ಬಂದೋಬಸ್ತ್ ನೋಡಿಕಿಳ್ಳೋಕೆ ಸೂಚನೆ ನೀಡಲಾಗಿದೆ.
ಇನ್ನು ಕಂಠೀರವ ಸ್ಟೂಡಿಯೋದಲ್ಲಿ ಕಾರ್ಯಕ್ರಮ ಹಿನ್ನೆಲೆ ನಾಳೆ ಸುತ್ತಾಮುತ್ತಾ ಹೆಚ್ಚು ಟ್ರಾಫಿಕ್ ಜಾಂ ಆಗಲಿದೆ.. ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ರಾಜ್ಯಗಳಿಂದಲೂ ಲಕ್ಷಾಂತರ ಜನ ಬರೋ ಸಾಧ್ಯತೆ ಇದ್ದು ಸ್ಟೇಡಿಯಂ ಗೆ ಕನೆಕ್ಟ್ ಆಗೋ ರಸ್ತೆಗಳನ್ನ ಬಳಸದಂತೆ ಸಂಚಾರಿ ಪೊಲೀಸ್ ಇಲಾಖೆ ಸೂಚನೆ ನೀಡಿದೆ.. ಅಲ್ಲದೇ ಕಾರ್ಯಕ್ರಮಕ್ಕೆ ಬರೋ ವಿವಿಐಪಿಗಳಾ ವಾಹನಗಳಿಗೆ ಮಾತ್ರ ಸ್ಟೇಡಿಯಂ ಒಳಗಡೆ ಎಂಟ್ರಿ ಇರಲಿದೆ.ಒಟ್ಟಾರೆಯಾಗಿ ನಾಳೆ ನಡೆಯೋ ಹೊಸ ಸರ್ಕಾರದ ಮೊದಲ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಜ್ಜಾಗಿದ್ದು ಜೋಡೆತ್ತುಗಳು ಸಿಎಂ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.