ಅಂದು ಬಸವಣ್ಣ, ಇಂದು ಸಿದ್ದರಾಮಣ್ಣ: ಲಿಂಗಾಯುತ ಸಮುದಾಯ ಪರ ಐತಿಹಾಸಿಕ ರಣಕಹಳೆ ಮೊಳಗಿಸಿದ ಕಾಂಗ್ರೆಸ್ ಸರ್ಕಾರ

Rajesh patil

ಸೋಮವಾರ, 19 ಮಾರ್ಚ್ 2018 (17:04 IST)
ನಿವೃತ್ತ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ನಾಗಮೋಹನ್ ದಾಸ್ ನೇತೃತ್ವದ ಏಳು ಸದಸ್ಯ ತಜ್ಞ ಸಮಿತಿಯ ಶಿಫಾರಸುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ಸರ್ವಾನುಮತದಿಂದ ಸ್ವೀಕರಿಸಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಸುದೀರ್ಘ ಚರ್ಚೆಯ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಸಂಪುಟದ ಮೂಲಗಳು ತಿಳಿಸಿವೆ.
 
ಸಚಿವರಾದ ಎಂ.ಬಿ.ಪಾಟೀಲ್ ಮತ್ತು ವಿನಯ್ ಕುಲ್ಕರ್ಣಿಯವರೊಂದಿಗೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಕೆಲ ಕಾಲ ಪರಸ್ಪರ ವಾಗ್ದಾಳಿಯಲ್ಲಿ ತೊಡಗಿದಾಗ ಸದನದಲ್ಲಿ ಕಾವೇರಿದ ವಾತಾವರಣ ಎದುರಾಗಿತ್ತು ಎನ್ನಲಾಗಿದೆ. 
 
ಲಿಂಗಾಯತ ಸಮುದಾಯಕ್ಕೆ "ಧಾರ್ಮಿಕ ಅಲ್ಪಸಂಖ್ಯಾತ" ಸ್ಥಾನಮಾನವನ್ನು ಶಿಫಾರಸು ಮಾಡುವ ಬಗ್ಗೆ ಸಮಿತಿಯು ತನ್ನ ವರದಿಯನ್ನು ಮಾರ್ಚ್ 2, 2018 ರಂದು ಸರಕಾರಕ್ಕೆ ಸಲ್ಲಿಸಿತ್ತು. ಆದರೆ, ಕಳೆದ ಮಾರ್ಚ್ 14 ರಂದು ನಡೆದ ಸಭೆಯಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಿದ್ದರಿಂದ ಸಭೆಯನ್ನು ಮುಂದೂಡಲಾಯಿತು. 
 
ವರದಿಯ ಪ್ರಕಾರ, ಲಿಂಗಾಯತ ಸಮುದಾಯವನ್ನು ಹಿಂದೂ ಧರ್ಮದ ಉಪ-ಪಂಗಡವೆಂದು ಪರಿಗಣಿಸಲಾಗುವುದಿಲ್ಲ. ಇದನ್ನು 12 ನೆಯ ಶತಮಾನದ ಸಾಮಾಜಿಕ ಸುಧಾರಕ ಬಸವಣ್ಣ ಸ್ಥಾಪಿಸಿದರು. ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ, ಲಿಂಗಾಯತ ಸಮುದಾಯಕ್ಕೆ ಬೌದ್ಧಧರ್ಮ ಮತ್ತು ಜೈನ ಧರ್ಮದಂತೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಬಹುದು ಎಂದು ಉಲ್ಲೇಖಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ