ಮೈಸೂರು: ಅರಮನೆಗೆ ಭೇಟಿ ನೀಡಲು ಬಯಸುವ ಪ್ರವಾಸಿಗರು ಇನ್ಮುಂದೆ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ. ಯಾಕೆಂದರೆ ಇನ್ಮುಂದೆ ಇಲ್ಲಿನ ಅಂಬಾವಿಲಾಸ ಅರಮನೆಯ ಪ್ರವೇಶ ಟಿಕೆಟ್‌ಗಳನ್ನು ವಾಟ್ಸ್‌ಆ್ಯಪ್‌ನಲ್ಲೂ ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಜ್ಯ ಸರ್ಕಾರದ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್)ದಿಂದ ಮೊಬೈಲ್ ಒನ್ ಯೋಜನೆಯ ಮೂಲಕ, ಮೊಬೈಲ್ ಫೋನ್ ಮೂಲಕ ಟಿಕೆಟ್ ಖರೀದಿಸಲು ವಾಟ್ಸ್‌ಆ್ಯಪ್ ಟಿಕೆಟಿಂಗ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.
ಇದರಿಂದ ಪ್ರವಾಸಿಗರು ಮುಂಚೆನೆ ಟಿಕೆಟ್ ಪಡೆದು, ತಮ್ಮ ಸಮಯವನ್ನು ಉಳಿತಾಯ ಮಾಡಿ, ಅರಮನೆ ಸೌಂದರ್ಯವನ್ನು ಮತ್ತಷ್ಟು ಎಂಜಾಯ್ ಮಾಡ್ಬೋದು.
ಈ ಉಪಕ್ರಮ ಬುಧವಾರದಿಂದಲೇ ಜಾರಿಗೆ ಬಂದಿದೆ. ವಾಟ್ಸ್‌ಆ್ಯಪ್ ಸಂ: 88841 60088ಗೆ Hi ಎಂದು ಟೈಪ್ ಮಾಡುವ ಮೂಲಕ ಅಥವಾ ಅರಮನೆ ಮಂಡಳಿಯ ಜಾಲತಾಣ https://mysorepalace.karnataka.gov.inನಲ್ಲಿ ನೀಡಿರುವ ವಾಟ್ಸ್‌ಆ್ಯಪ್ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಟಿಕೆಟ್ ಖರೀದಿಸಬಹುದಾಗಿದೆ.
ಆ ಟಿಕೆಟ್‌ಗಳ ವ್ಯಾಲಿಡಿಸಿ ಖರೀದಿಸಿದ ದಿನದಿಂದ ಐದು ದಿನಗಳವರೆಗೆ ಇರುತ್ತದೆ. ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಅರಮನೆಯನ್ನು ವೀಕ್ಷಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.