ರ್ಯಾಪಿಡ್ ರಸ್ತೆಗೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ

ಶನಿವಾರ, 14 ಜನವರಿ 2023 (17:59 IST)
ಒಂದೇ ತಿಂಗಳಲ್ಲಿ ರ್ಯಾಪಿಡ್ ರಸ್ತೆಯ ಅಸಲಿ ಬಣ್ಣ ಬಯಲಾಗಿದೆ.ದೇಶದ ಮೊದಲ ರ್ಯಾಪಿಡ್ ರಸ್ತೆಗೆ ಪ್ರಾರಂಭದಲ್ಲೆ ವಿಗ್ನ ಎದುರಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ ರ್ಯಾಪಿಡ್ ರಸ್ತೆ ನಿರ್ಮಾಣ ಮಾಡಿದೆ.ನಿರ್ಮಾಣ ಮಾಡಿ ಒಂದೇ ತಿಂಗಳಲ್ಲಿ ರ್ಯಾಪಿಡ್ ರಸ್ತೆ ಬಿರುಕು ಬಿಟ್ಟಿದ್ದು,ರಸ್ತೆ ಬಗ್ಗೆ ಸಾರ್ವಜನಿಕ ರಿಂದ ಹಾಗೂ ತಜ್ಞರಿಂದ ವಿರೋಧ ವ್ಯಕ್ತವಾಗಿದೆ.
 
ಇನ್ನು ಇತ್ತ ಬಿಬಿಎಂಪಿ ಆಯುಕ್ತರು ಪ್ರಾಜೆಕ್ಟ್ ಮುಗಿದಿದೆ ಎಂದು ಪ್ರತಿಕ್ರಿಯಿಸಿದ್ದಾರೆ,ಮುಂದಿನ ದಿನಗಳಲ್ಲಿ ನಗರದಲ್ಲಿ ರ್ಯಾಪಿಡ್ ರಸ್ತೆ ಬೇಡ ಅಂತ ಸಿಎಂ ಹೇಳಿದ್ದು,ವೈಟ್ ಟ್ಯಾಪಿಂಗ್ ರಸ್ತೆಗೆ ಪರ್ಯಾಯ ವಾಗಿ ರ್ಯಾಪಿಡ್ ರಸ್ತೆಯನ್ನ ಬಿಬಿಎಂಪಿ ನಿರ್ಮಾಣ ಮಾಡಿದೆ.ರ್ಯಾಪಿಡ್ ರಸ್ತೆ ನಿರ್ಮಾಣದಿಂದ ಕಾಮಗಾರಿ ಬೇಗ ರಸ್ತೆ ನಿರ್ಮಾಣ ಅಗುತ್ತೆ.ರಸ್ತೆ ಸಂಚಾರಕ್ಕೆ ಅನುಕೂಲ ಅಗುತ್ತೆ ಅಂತ ರ್ಯಾಪಿಡ್ ರಸ್ತೆ ನಿರ್ಮಾಣ ಕ್ಕೆ ಬಿಬಿಎಂಪಿ ಮುಂದಾಗಿತ್ತು.
 
ಪಾಲಿಕೆ ರ್ಯಾಪಿಡ್ ರಸ್ತೆ ನಿರ್ಮಾಣ ಕ್ಕೆ ಆರಂಭದಲ್ಲೇ ತಜ್ಞರು ಬೇಡ ಎಂದಿದ್ದರುತಜ್ಞರ ಅಭಿಪ್ರಾಯಕ್ಕೂ ಬಿಬಿಎಂಪಿ  ಕ್ಯಾರೆ ಅಂದಿಲ್ಲ.ಬಿಬಿಎಂಪಿಯ ಇಂಜಿನಿಯರ್ ಗಳ ನಿರ್ಧಾರ ಕ್ಕೆ ಸಿಎಂ ಗರಂ ಆಗಿದ್ದು,ನಿನ್ನೆ ಸಿಎಂ ಸಭೆಯಲ್ಲಿ ಅಯುಕ್ತರಿಗೆ ರ್ಯಾಪಿಡ್ ರಸ್ತೆ ಬಗ್ಗೆ ವಿವರಣೆಯನ್ನ ಸಿಎಂ ಕೇಳಿದರು.ಸಭೆ ನಂತರ ಮೌಖಿಕವಾಗಿ ರ್ಯಾಪಿಡ್ ರಸ್ತೆ ಬೇಡ ಅಂತ ಅಯುಕ್ತರಿಗೆ ಸಿಎಂ  ಸೂಚನೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ