ಸಾವಿರಾರು ಕೋಟಿ ಬಜೆಟ್ ಮಂಡಿಸೋ ಬಿಬಿಎಂಪಿ ಖಜಾನೆ ಖಾಲಿಯಾಯ್ತಾ..!?

ಶನಿವಾರ, 14 ಜನವರಿ 2023 (17:47 IST)
ಹತ್ತಾರು ಸಾವಿರ ಕಾಮಗಾರಿ ಮಾಡಿಸೋ ಪಾಲಿಕೆ ಬಳಿ ಗುತ್ತಿಗೆದಾರರಿಗೆ ನೀಡೋಕೆ ಹಣ ಇಲ್ವಾ..?ಖಜಾನೆ ಖಾಲಿಯಾಗಿದೆ ಹಣಕ್ಕಾಗಿ ಬಿಬಿಎಂಪಿ ಬ್ಯಾಂಕ್ ಮೊರೆ ಹೋಗಿದೆ.ಬ್ಯಾಂಕಿನಿಂದ ಸಾಲ ಪಡೀಬೇಕು ಅನುಮತಿ ಕೊಡಿ ಅಂತ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.ಸುಮಾರು ೭೦೦ ಕೋಟಿ ಸಾಲ ಪಡೆಯಲು ಪಾಲಿಕೆ ಮುಂದಾಗಿದೆ. ಬಾಕಿ ಇರೋ ಹಣ ಬಿಡುಗಡೆಗೆ ಈ ತಿಂಗಳು ಡೆಡ್ ಲೈನ್ ಗುತ್ತಿಗೆದಾರರು ಕೊಟ್ಟಿದ್ದಾರೆ.ಬ್ಯಾಂಕ್ ನಿಂದ ಸಾಲ ಪಡೆಯೋಕೆ ಎಸ್ಕ್ರೋ ಅಕೌಂಟ್ ಓಪನ್ ನ್ನ ಪಾಲಿಕೆ ಮಾಡಿದೆ.ಆರು ತಿಂಗಳು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ಅಗತ್ಯವಿರೋ ಸಾಲ ಪಡೆಯೋಕೆ ತೀರ್ಮಾನ ಮಾಡಿದ್ದು,ಸರ್ಕಾರದಿಂದ ಹಸಿರು ನಿಶಾನ್ ಸಿಗ್ತಾ ಇದ್ದಂತೆ ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆಯಾಗುತ್ತೆ.ಈಗಾಗಲೇ ಮೊದಲ ಹಂತದ ಪ್ರಸ್ತಾವನೆಗೆ ಸರ್ಕಾರ ಸಮ್ಮತಿಸಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ