ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳಿಸುವ ಕಾಯ್ದೆ ತಿದ್ದುಪಡಿಗೆ ರಾಜ್ಯಸರ್ಕಾರ ಯತ್ನ

ಮಂಗಳವಾರ, 10 ಮಾರ್ಚ್ 2020 (11:10 IST)
ಬೆಂಗಳೂರು : ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳಿಸುವ ಕಾಯ್ದೆ ತಿದ್ದುಪಡಿ ತರುವುದಕ್ಕೆ ರಾಜ್ಯಸರ್ಕಾರ ಯತ್ನಿಸುತ್ತಿದೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ  ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳಿಸಲು ಕಾಯ್ದೆ ಜಾರಿಗೆ ತಂದಿದ್ದರು. ಆದರೆ ಈ ಕಾಯ್ದೆಯ 20ಕ್ಕೂ ಹೆಚ್ಚು ಅಂಶಗಳಿಗೆ ಕಾನೂನು ತಿದ್ದುಪಡಿ ತರುವುದಕ್ಕೆ ರಾಜ್ಯಸರ್ಕಾರ ಪ್ರಯತ್ನ ನಡೆಸುತ್ತಿದೆ. ಆಡಳಿತ ಪಕ್ಷದ ಶಾಸಕರ ಒತ್ತಾಯದ ಹಿನ್ನಲೆಯಲ್ಲಿ ತಿದ್ದುಪಡಿ ಮುಂದಾದ ಸರ್ಕಾರ ಪ್ರಸಕ್ತ ಅಧಿವೇಶನದಲ್ಲೇ ತಿದ್ದುಪಡಿ ಕಾಯ್ದೆ ಮಂಡನೆಗೆ ಚಿಂತನೆ ಮಾಡುತ್ತಿದೆ.

 

2017ರಲ್ಲಿ ಜಿ.ಪಂ, ತಾ.ಪಂ, ಗ್ರಾ,ಪಂ, ಗಳಿಗೆ ಮೀಸಲಾತಿ ಎರಡು ಅವಧಿಗೆ ನಿಗದಿಪಡಿಸಿ ತಿದ್ದುಪಡಿ ಮಾಡಲಾಗಿತ್ತು. ಎರಡು ಅವಧಿ ಮೀಸಲಾತಿಯನ್ನು ಒಂದೇ ಅವಧಿ ಅಂದರೆ 5 ವರ್ಷಕ್ಕೆ  ಸೀಮಿತಗೊಳಿಸಲು ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ .

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ