ಉಭಯ ನಾಯಕರ ಆಣೆ ಪ್ರಮಾಣ ವಿಚಾರ; ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಗುರುವಾರ, 17 ಅಕ್ಟೋಬರ್ 2019 (10:13 IST)
ಮೈಸೂರು :ಚಾಮುಂಡಿ ಬೆಟ್ಟದಲ್ಲಿ ಉಭಯ  ನಾಯಕರ ಆಣೆ ಪ್ರಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್  ಏರ್ಪಡಿಸಲಾಗಿದೆ.




ಸಾರಾ ಮಹೇಶ್ ಅವರು ಸದನದಲ್ಲಿ , ಹೆಚ್ ವಿಶ್ವನಾಥ್ ಅವರು 25ಕೋಟಿಗೆ ತಮ್ಮನ್ನ ಮಾರಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದನ್ನು ವಿಶ್ವನಾಥ್ ಅವರು ಅಲ್ಲಗೆಳೆದು ಇಂದು ಚಾಮುಂಡಿ ಸನ್ನಿದಿಯಲ್ಲಿ ಆಣೆ ಪ್ರಮಾಣ ಮಾಡಲು ಮುಂದಾಗಿದ್ದರು. ಈ ಹಿನ್ನಲೆಯಲ್ಲಿ ಹೆಚ್ ವಿಶ್ವನಾಥ್ ಹಾಗೂ ಸಾರಾ ಮಹೇಶ್ ಬೆಂಬಲಿಗರ ನಡುವೆ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು 30 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.


ಅಲ್ಲದೇ ಯಾವುದೇ ಗಲಾಟೆ ನಡೆಯಬಾರದು ಎಂಬ ಕಾರಣಕ್ಕೆ ಪೊಲೀಸರು ಹೆಚ್ ವಿಶ್ವನಾಥ್ ಅವರು ಇಲ್ಲಿಂದ ಹೋಗುವಂತೆ ಮನವೊಲಿಸಲು ಯತ್ನಿಸುತ್ತಿದ್ದಾರೆ. ಆದರೆ ವಿಶ್ವನಾಥ‍್ ಅವರು ಪಟ್ಟುಹಿಡಿದು ಅಲ್ಲೇ ಕುಳಿತುಕೊಂಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ