ನಿನ್ನೆಯಿಂದ ಆರ್ಕಿಡ್ ಸ್ಕೂಲ್ ಮುಂಭಾಗ ದೊಡ್ಡ ಹೈಡ್ರಾಮವೇ ನಡೆಯುತ್ತಿದೆ.ಪೋಷಕರ ಪ್ರತಿಭಟನೆಗೆ ಮಣಿದು DDPI, BEO ಸ್ಥಳಕ್ಕೆ ಬಂದಿದ್ದಾರೆ.ಆರ್ಕಿಡ್ಸ್ ಶಾಲೆಗೆ ಡಿಡಿಪಿಐ ಬೈಲಾಂಜನಪ್ಪ ಆಗಮಿಸಿದ್ದು,ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿದ್ದಾರೆ.ಡಿಡಿಪಿಐ ಬೈಲಾಂಜನಪ್ಪ ಅವರನ್ನ ಪೋಷಕರು ತರಾಟೆಗೆ ತೆಗೆದುಕೊಂಡಿದ್ರು.
ಲಂಚ ತೆಗೆದುಕೊಂಡು ಸುಮ್ಮನಿದ್ದೀರಾ ಅಂತಾ ಖಾರದ ಪ್ರಶ್ನೆಯನ್ನ ಪೋಷಕರು ಕೇಳಿದ್ರು.ಪ್ರಿನ್ಸಿಪಲ್ ಹತ್ರ ಸ್ಕೂಲ್ ಡಾಕ್ಯುಮೆಂಟ್ಸ್ ಕೇಳಿದ್ದೆನೆ ತನಿಖೆ ಮಾಡಿ ಹೇಳ್ತಿನಿ ಎಂದು BEO ಹೇಳಿದ್ದು,ಪೋಷಕರು ಮತ್ತು BEO ನಡುವೆ ಮಾತಿನ ಚಕಮಕಿ ತಾರಕಕ್ಕೇರಿದೆ.ಇಷ್ಟ ದಿನ ಏನ್ ಮಾಡ್ತಿದ್ರಿ? ಪರ್ಮಿಸನ್ ಹೇಗೆ ಕೊಟ್ರಿ? ನಿನ್ನೆಯಿಂದ ಇಷ್ಟೆಲ್ಲ ಹೈಡ್ರಾಮಾ ಆಗಿದೆ.ಇಂದು DDPI BEO ಬಂದ್ರು ಸ್ಥಳಕ್ಕೆ ಸ್ಕೂಲ್ ಮ್ಯಾನೆಜ್‌ಮೆಂಟ್ ನವರು ಬಂದಿಲ್ಲ.ಸ್ಥಳದಲ್ಲಿ ಸ್ಕೂಲ್ ಮ್ಯಾನೆಜ್‌ಮೆಂಟ್ ಇಲ್ಲದ ಕಾರಣ ಗೊಂದಲ ಉಂಟಾಗಿದೆ.
ನಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಲಿದೆ ಅಂತ ಬಿಇಒ ಹತ್ರ ಪೋಷಕರು ಕೈ ಮುಗಿದು ಮನವಿ ಮಾಡಿದ್ದಾರೆ.ಆದ್ರು ಶಾಲೆಯ ಮುಂಭಾಗ ನಿಲ್ತಿಲ್ಲ ರಂಪಾಟ. ದಿನಕ್ಕೊಂದು ಹೇಳಿಕೆ ಕೊಡುವ ಮೂಲಕ ಪೋಷಕರನ್ನ ಶಿಕ್ಷಣ ಇಲಾಖೆ ಸಂಕಷ್ಟಕ್ಕೆ ನುಕ್ಕುತ್ತಿದ್ದು ,ಜೊತೆಗೆ ಶಾಲೆಯ ಆಡಳಿತ ಮಂಡಳಿ ಸರಿಯಾದ ದಾಖಲೆ ನೀಡ್ತಿಲ್ಲ.ಹೀಗಾಗಿ ಶಾಲೆಯ ಆಡಳಿತ ಮಂಡಳಿ ವಿರುದ್ದ ಪೋಷಕರು ನಿಗಿ ನಿಗಿ ಕೆಂಡಕಾರುತ್ತಿದ್ದಾರೆ.