ಚಂದ್ರ ಗ್ರಹಣಕ್ಕೆ ಹೆದರಿ ಊರನ್ನೇ ತೊರೆದ ಗ್ರಾಮಸ್ಥರು

ಶುಕ್ರವಾರ, 27 ಜುಲೈ 2018 (15:31 IST)
ಮೂಢ ನಂಬಿಕೆಗೆ ಹೆದರಿ ಆ ಗ್ರಾಮಸ್ಥರು ಊರನ್ನೇ ತೊರೆದಿದ್ದಾರೆ. ಜ್ಯೋತಿಷಿ ಭವಿಷ್ಯಕ್ಕೆ ಹೆದರಿ ಊರು ಬಿಟ್ಟ ಇಡೀ ಗ್ರಾಮದ ಜನರು ಪರ ಸ್ಥಳಕ್ಕೆ ತೆರಳಿದ್ದಾರೆ. ಆ ಗ್ರಾಮ ಈಗ ಬಿಕೋ ಎನ್ನುತ್ತಿದೆ.

ಚಂದ್ರ ಗ್ರಹಣದ ವೇಳೆಗೆ ಗ್ರಾಮ ತೊರೆಯದಿದ್ದರೆ ರಕ್ತಕಾರಿ ಸಾಯುವ ಭೀತಿಯಿದೆ ಎಂದು ನುಡಿದ ಭವಿಷ್ಯಕ್ಕೆ ಇಡೀ ಗ್ರಾಮದ ಜನರು ಹೆದರಿದ್ದಾರೆ. ಹೀಗಾಗಿ ಚಂದ್ರಗ್ರಣ ದಿನದವೊತ್ತಿಗೆ ಊರು ಬಿಡದಿದ್ದರೆ ಸಾಯುವ ಭಯದಿಂದ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆ ಗ್ರಾಮದ ಹತ್ತಿರದ ಸಿಗುವಾನಿ ಗ್ರಾಮದ ಜನರೆಲ್ಲ ಊರನ್ನೇ ತೊರೆದಿದ್ದಾರೆ. ಈ ಗ್ರಾಮದಲ್ಲಿ ಕಳೆದ 15 ವರ್ಷಗಳಲ್ಲಿ 25 ಸಾವು ಸಂಭವಿಸಿವೆ.

ಹೀಗಾಗಿ ಇಡೀ ಗ್ರಾಮಕ್ಕೆ ಆವರಿಸಿದ ಆತಂಕದಿಂದ ಊರನ್ನೇ ತೊರೆದಿದ್ದಾರೆ. ರಾತ್ರೋ ರಾತ್ರಿ ಊರನ್ನೇ ತೊರೆದ 60 ಕುಟುಂಬಗಳು ಪರಸ್ಥಳಗಳಿಗೆ ತೆರಳಿದ್ದಾರೆ. ಇನ್ನು ನಾವು ಇಲ್ಲೆ ಉಳಿದರೆ ಸಾಯುವ ಭಯ ಕಾಡುವುದು ಪಕ್ಕಾ ಎಂಬುದು ಅಲ್ಲಿನವರಿಗೆ ಆತಂಕ ತಂದೊಡ್ಡಿದ ವಿಷಯವಾಗಿತ್ತು. ಮಲಯಾಳಿ ಮಾಂತ್ರಿಕನ ಭವಿಷ್ಯಕ್ಕೆ ಬೆಚ್ಚಿ ಬಿದ್ದ ಜನರು ಗ್ರಾಮ ತೊರೆದಿದ್ದಾರೆ.  ತಾವು ಸಾಕಿದ್ದ ಸಾಕು ಪ್ರಾಣಿ, ಕೋಳಿಗಳನ್ನು ಬಿಟ್ಟು ಹೋಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ