ಖಗ್ರಾಸ ಚಂದ್ರಗ್ರಹಣ: ಪಂಚಾಂಗ ಏನು ಹೇಳುತ್ತದೆ?

ಶುಕ್ರವಾರ, 27 ಜುಲೈ 2018 (10:07 IST)
ಬೆಂಗಳೂರು: ಇಂದು ಶತಮಾನದ ಸುದೀರ್ಘ ಚಂದ್ರಗ್ರಹಣಕ್ಕೆ ವಿಶ್ವವೇ ಸಾಕ್ಷಿಯಾಗಲಿದೆ. ಖಗ್ರಾಸ ಚಂದ್ರಗ್ರಹಣದ ಬಗ್ಗೆ ಪಂಚಾಂಗ ಏನು ಹೇಳುತ್ತದೆ? ನೋಡೋಣ.

ಪಂಚಾಂಗದಲ್ಲಿ ಹೇಳುವಂತೆ ಗ್ರಹಣ ಸ್ಪರ್ಶ ಕಾಲ 11.53, ಮಧ್ಯ ಕಾಲ 1.51 ಮತ್ತು ಮೋಕ್ಷ ಕಾಲ 3.48.  ಖಗ್ರಾಸ ಸಂಪೂರ್ಣ ಚಂದ್ರಗ್ರಹಣ ಇದಾಗಲಿದೆ.

ಉತ್ತರಾಷಾಢ ಹಾಗೂ ಶ್ರವಣ ನಕ್ಷತ್ರಗಳ ಮಕರ ರಾಶಿಯಲ್ಲಿ ಚಂದ್ರನಿಗೆ ಕೇತುಗ್ರಹಣ. ಈ ನಕ್ಷತ್ರ ರಾಶಿಯವರಿಗೆ ಮತ್ತು ಕುಂಭ, ಮಿಥುನ, ಸಿಂಹ ರಾಶಿಯವರಿಗೆ ಇಂದಿನ ಗ್ರಹಣದಿಂದ ಹಾನಿ.  ಈ ರಾಶಿ, ನಕ್ಷತ್ರದವರು ಗ್ರಹಣ ಕಾಲದಲ್ಲಿ ದೇವರ ದೀಪ ಹಚ್ಚಿ ಇಷ್ಟ ದೇವರ ಪ್ರಾರ್ಥನೆ ಮಾಡುವುದು ಅಥವಾ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಒಳಿತು.

2.53 ರ ನಂತರ ಭೋಜನ ನಿಷಿದ್ಧ. ಬಾಲ ವೃದ್ಧಾತುರರಿಗೆ ರಾತ್ರಿ 8.30 ರವರೆಗೆ ಭೋಜನ ಸೇವಿಸಲು ಅವಕಾಶವಿದೆ. ಮರುದಿನ ಬೆಳಿಗ್ಗೆ ಸ್ನಾನ ಮಾಡಿ ಅಡುಗೆ ಸೇವಿಸುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ