ರಾಜ್ಯದ ಮೀನು ರಫ್ತಿಗೆ ಗೋವಾ ತಡೆ

ಶುಕ್ರವಾರ, 20 ಜುಲೈ 2018 (17:41 IST)
ಜೂನ್ ಮತ್ತು ಜುಲೈ ತಿಂಗಳಲ್ಲಿ ಸರ್ಕಾರವೇ ಕರಾವಳಿ ಪ್ರದೇಶದಲ್ಲಿ ಕಡಲಿಗೆ ಇಳಿದು ಮೀನುಗಾರಿಕೆ ಮಾಡದಂತೆ ನಿಷೇದವನ್ನ ಹೇರಲಾಗುತ್ತದೆ. ಮೀನುಗಳು ಮಳೆಗಾಲದ ಅವಧಿಯಲ್ಲಿ ಸಂತಾನೋತ್ಫತ್ತಿಯಲ್ಲಿ ತೊಡಗುತ್ತದೆ ಎಂದು ಬಂದ್ ಮಾಡಲಾಗುತ್ತದೆ. ಇನ್ನು ಸಂದರ್ಭದಲ್ಲಿ ತಾಜಾ ಮೀನುಗಳು ಮಾರಾಟಕ್ಕೆ ಸಿಗದ ಹಿನ್ನಲೆಯಲ್ಲಿ ಐಸ್ ನಲ್ಲಿ ಹಾಕಿದ ಮೀನುಗಳನ್ನ ಬೇರೆ ಬೇರೆ ಪ್ರದೇಶದಿಂದ ತಂದು ಮಾರಾಟ ಮಾಡಲಾಗುತ್ತದೆ. ಆದ್ರೆ ಮೀನುಗಳು ಕೆಡದಂತೆ ಅಪಾಯಕಾರಿ ರಾಸಾಯನಿಕ ಪದಾರ್ಥ ಬಳಸುವ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.

ಗೋವಾ ರಾಜ್ಯದಲ್ಲಿ ಆಂಧ್ರ ಪ್ರದೇಶತಮಿಳುನಾಡು, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯದಿಂದ ಬರುತ್ತಿದ್ದ ಮೀನುಗಳಲ್ಲಿ ಕೆಡದಂತೆ ಶವಗಳು ಕೆಡದಂತೆ ಬಳಸುವ ಫಾರ್ಮೋಲಿನ್ ರಾಸಾಯನಿಕ ಹಾಕಿರುವ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಗೋವಾದಲ್ಲಿ ಆಗಸ್ಟ್ ಒಂದರ ವರೆಗೆ ಹೊರ ರಾಜ್ಯದಿಂದ ಬರುವ ಮೀನುಗಳಿಗೆ ನಿಷೇದ ಹೇರಿದೆ. ಈಚೆಗೆ ಮೀನುಗಳು ತಿಂದರೆ ಆರೋಗ್ಯದ ಮೇಳೆ ಪರಿಣಾಮ ಬೀರಿದ ಹಿನ್ನಲೆಯಲ್ಲಿ ತಪಾಸಣೆ ಮಾಡಿದ ಹಿನ್ನಲೆಯಲ್ಲಿ ಫಾರ್ಮೋಲಿನ್ ರಾಸಾಯನಿಕ ಬಳಕೆ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಇಂದಿನಿಂದ ಗೋವಾ ಗಡಿಯಲ್ಲಿ ಹೊರ ರಾಜ್ಯದಿಂದ ಬರುವ ಮೀನು ವಾಹನ ಪ್ರವೇಶ ಮಾಡುವುದನ್ನ ತಡೆಯಲಾಗಿದೆ.  

ಕಾರವಾರ ತಾಲೂಕಿನ ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ಗೋವಾ ಪೊಲೀಸರು ಹೊರ ರಾಜ್ಯದ ಮೀನು ವಾಹನವನ್ನ ರಾಜ್ಯಕ್ಕೆ ಪ್ರವೇಶಿಸಂದತೆ ತಡೆದು ವಾಪಾಸ್ ಕಳುಹಿಸಿಕೊಡುವ ಕಾರ್ಯವನ್ನ ಮಾಡಿದ್ದಾರೆ. ಇಂದು ಬೆಳಿಗ್ಗೆಯಿಂದ ಕರ್ನಾಟಕ ಸೇರಿದಂತೆ ಯಾವ ರಾಜ್ಯದ ಮೀನು ವಾಹನಗಳನ್ನ ಗೋವಾ ಪೊಲೀಸರು ರಾಜ್ಯಕ್ಕೆ ಬಿಟ್ಟಿಕೊಂಡಲಿಲ್ಲ. ಹೀಗಾಗಿ ಗೋವಾದಿಂದ ಆಮದಾಗುವ ಮೀನುಗಳ ಮೇಲೆಯೂ ನಿಷೇಧ ಹೇರುವಂತೆ ರಾಜ್ಯ ಸರಕಾರಕ್ಕೆ ಮೀನುಗಾರರು ಒತ್ತಾಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ