ಅತ್ಯಾಚಾರ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆ ಮುಂದೆ ಕಾಯುತ್ತಿರುವ ಮಹಿಳೆ!
ಶನಿವಾರ, 4 ಆಗಸ್ಟ್ 2018 (18:01 IST)
ಅತ್ಯಾಚಾರ ಆರೋಪದ ಪ್ರಕರಣ ದಾಖಲಿಸಲು ಠಾಣೆ ಎದುರು ಸಂಜೆವರೆಗೂ ಕಾದರೂ ಸಹ ಎಫ್ ಐ ಆರ್ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಘಟನೆ ಜರುಗಿದೆ. ಗದಗ ಸಮೀಪದ ಲಕ್ಕುಂಡಿ ಗ್ರಾಮದ ಮಹಿಳೆ ಎಫೈಆರ್ ದಾಖಲಿಸಲು ಠಾಣೆಗೆ ಬಂದ್ರೆ ಪೊಲೀಸರು ಮಾತ್ರ ಕೇರ್ ಮಾಡದೆ ಅಮಾನವೀಯವಾಗಿ ನಡೆದು ಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತೀವ್ರ ಗಾಯಗೊಂಡಿದ್ದ ಮಹಿಳೆ ಠಾಣೆ ಎದುರು ನರಳಾಡಿದರೂ ಸಹ ಪೊಲೀಸರು ಸಹಾನುಭೂತಿ ತೋರದೆ ರಾಕ್ಷಸರಂತೆ ವರ್ತಿಸಿದ್ದಾರೆ. ಲಕ್ಷ್ಮವ್ವ ಮೂಲತಃ ಲಕ್ಕುಂಡಿ ಗ್ರಾಮದ ನಿವಾಸಿ ತೋಟದ ಮನೆಯಲ್ಲಿ ವಾಸಿಸುತ್ತಿರುವ ಈಕೆ ಗಂಡ ಕುರುಡನಾಗಿದ್ದು ಅವರನ್ನ ಕರೆದುಕೊಂಡು ಬರಲು ರಾತ್ರಿ ಲಕ್ಕುಂಡಿಗೆ ಹೋಗುವ ಸಂದರ್ಭದಲ್ಲಿ ಅತ್ಯಾಚಾರಕ್ಕೆ ಯತ್ನ ನಡೆದಿದೆ ಎಂದು ಹೇಳಲಾಗ್ತಿದೆ. ಮಹಿಳೆಯನ್ನು ಬೈಕ್ ನಲ್ಲಿ ಬಿಡುವುದಾಗಿ ಪುಸಲಾಯಿಸಿ ಅದೇ ಗ್ರಾಮದ ರಾಜಾಸಾಬ್ ಎಂಬುವನು ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ಲಕ್ಕುಂಡಿ ಗ್ರಾಮದಿಂದ ಒಂದು ಕಿ.ಮೀ. ದೂರದಲ್ಲಿನ ತನ್ನ ಹೊಲದ ಮನೆಯಿಂದ ಊರಲ್ಲಿರುವ ಅತ್ತೆಯ ಮನೆಗೆ ಗಂಡನನ್ನು ಕರೆಯಲೆಂದು ಬರುವಾಗ ಅದೇ ಗ್ರಾಮದ ಕುರಿಗಾಯಿ ರಾಜಾಸಾಬ್ ಎಂಬುವರು ಈ ಕೃತ್ಯ ಎಸಗಿದ್ದಾರೆ ಅಂತ ಮಹಿಳೆ ಆರೋಪ ಮಾಡ್ತಿದ್ದಾಳೆ. ಆದರೆ ಈ ಕುರಿತು ಪ್ರಕರಣ ಮಾತ್ರ ದಾಖಲಾಗಿಲ್ಲ ಎಂದು ಮಹಿಳೆ ದೂರುತ್ತಿದ್ದಾಳೆ.