ಕ್ವಾರಂಟೈನ್ ನಲ್ಲಿರುವ ಮಹಿಳೆ ಓಡಾಟ; ಮೆಜೆಸ್ಟಿಕ್ ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಆತಂಕ

ಶನಿವಾರ, 23 ಮೇ 2020 (09:36 IST)
Normal 0 false false false EN-US X-NONE X-NONE

ಬೆಂಗಳೂರು : ಕ್ವಾರಂಟೈನ್ ನಲ್ಲಿರುವ ಮಹಿಳೆ ಓಡಾಟದ ಹಿನ್ನಲೆಯಲ್ಲಿ ಮೆಜೆಸ್ಟಿಕ್ ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಆತಂಕ ಶುರುವಾಗಿದೆ.

 

ಆಂಧ್ರದ ಅನಂತಪುರದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆ ದೊಡ್ಡಬಳ್ಳಾಪುರಕ್ಕೆ ಹೋಗಲು  ಮೆಜೆಸ್ಟಿಕ್ ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಓಡಾಟ ನಡೆಸಿದ್ದಾಳೆ. ಈ ಹಿನ್ನಲೆಯಲ್ಲಿ ಜನರಲ್ಲಿ ಕೊರೊನಾ ಸೋಂಕಿನ ಭಯ ಮನೆಮಾಡಿದೆ.
 

ಸ್ಥಳಕ್ಕೆ ಪೊಲೀಸರು ಆಗಮಿಸಿ ಮಹಿಳೆಯ ವಿಚಾರಣೆ ನಡೆಸುತ್ತಿದ್ದಾರೆ. ಹಾಗೇ ಮಹಿಳೆಯನ್ನು ಮನೆಗೆ ಕಳಿಸಲು ಬಿಎಂಟಿಸಿ ಸಿಬ್ಬಂದಿ ವ್ಯವಸ್ಥೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಮಹಿಳೆಯ ಓಡಾಟ ಬಿಎಂಟಿಸಿ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ