ಬೈಕ್ ಫೋಟೋ ತೆಗೆದದ್ದಕ್ಕೆ ಟ್ರಾಫಿಕ್ ಪೊಲೀಸ್ ಗೆ ಎಂಥಾ ಗತಿ ಬಂತು?

ಶನಿವಾರ, 22 ಜೂನ್ 2019 (16:34 IST)
ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿದ್ದವನೊಬ್ಬ ಟ್ರಾಫಿಕ್ ಪೊಲೀಸ್ ರೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿದ್ದವನ ಬೈಕ್ ನ ಫೋಟೊ ತೆಗೆದ ಕರ್ತವ್ಯ ನಿರತ ಟ್ರಾಫಿಕ್ ಕಾನ್ ಸ್ಟೇಬಲ್ ಗೆ ಬೈಕ್ ಸವಾರನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾನೆ. 

ಈ ಘಟನೆ ಮಂಗಳೂರಿನ ತೊಕ್ಕೊಟ್ಟು ಫ್ಲೈ ಓವರ್ ಸಮೀಪದಲ್ಲಿ ನಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಸಿಬ್ಬಂದಿ ಸಂಗಣ್ಣ ಗೌಡ ಹಲ್ಲೆಗೊಳಗಾದವರೆನ್ನಲಾಗಿದೆ.

ಬೈಕ್ ಸವಾರ ಮದನಿ ನಗರದವನೆಂದು ತಿಳಿದು ಬಂದಿದ್ದು, ಆತನ ವಿರುದ್ಧ ಸಂಗಣ್ಣ ಗೌಡ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯ ಶೋಧ ನಡೆಸುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ