ಕಾವೇರಿ ನೀರಿನ ವಿಚಾರವಾಗಿ ಸ್ವಲ್ಪ ಗಲಾಟೆ ನಡೆಯುತ್ತಿದೆ-ಡಿಕೆಶಿ

ಶುಕ್ರವಾರ, 8 ಸೆಪ್ಟಂಬರ್ 2023 (16:01 IST)
ಕುಮಾರಸ್ವಾಮಿ-ಯೋಗೇಶ್ವರ್ ಒಗ್ಗಟ್ಟು ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಒಳ್ಳೆಯದಾದಲಿ, ಚೆನ್ನಾಗಿರಲಿ.ಅಶೋಕಣ್ಣ -ಕುಮಾರಣ್ಣ ಚುನಾವಣೆ ಮಾಡ್ಲಿಲ್ವ?ಅವರ ಸಿದ್ದಾಂತ ಹೇಗೆ ವರ್ಕೌಟ್ ಆಗುತ್ತೋ ನೋಡಬೇಕುದೇವೇಗೌಡರ ಐಡಿಯಾಲಜಿ,ಅವರ ಪಾರ್ಟಿ ,ಅವರ ಪಕ್ಷ, ಶಾಸಕರು ಉಳಿತಾರೋ ಗೊತ್ತಿಲ್ಲ.ಅವರ ಪಕ್ಷದ ಬಗ್ಗೆ ಮಾತನಾಡಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.ದೇವೇಗೌಡ-ಅಮಿತ್ ಶಾ ಭೇಟಿ ವಿಚಾರವಾಗಿ ನಮ್ಮ ಅಭ್ಯಂತರ ಇಲ್ಲ, ಇದು ಹೊಸದೇನೂ ಅಲ್ಲ ಅವರಿಗೆ ಶುಭವಾಗಲಿ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.
 
ಕಾವೇರಿ ನದಿ ನೀರು ಹಂಚಿಕೆ ವಿವಾದವಾಗಿ ನಾವು ಮಳೆ‌ ನೋಡುತ್ತಿದ್ದೇವೆ ನೀರು ನಿಲ್ಲಿಸಬೇಕು.ಸ್ವಲ್ಪ‌ ಗಲಾಟೆ ನಡೆಯುತ್ತಿದೆ,ಒಳ ಹರಿವು ಬರ್ತಿಲ್ಲ.ನೀರು ಬಿಡುವಂತೆ ಕೋರ್ಟ್ ಆದೇಶ ಕೊಟ್ಟಿದೆ .ಏನೇ ಆಗಲೀ ರೈತರ ರಕ್ಷಣೆ ಆಗಬೇಕು.ಕುಡಿಯುವ ನೀರಿನ ರಕ್ಷಣೆ ಮಾಡಬೇಕು.ತಮಿಳು ನಾಡಿನವರು ಕ್ರಾಪ್ಟ್ ಮಾಡಿಕೊಳ್ತಿದ್ದಾರೆ.ಅವರು ಪ್ಲಾನ್ ಮಾಡಿಕೊಳ್ಳಬೇಕು ಅದು ಅವರ ತಪ್ಪು.ನೀರೇ ಇಲ್ಲ,ಒಳ ಹರಿವು ಇಲ್ಲ.ನಮ್ಮ ಪ್ರಯಾರಿಟಿ ಕುಡಿಯುವ ನೀರಿಗೆ ಇದೆ.ಅದಕ್ಕೆ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
 
ನೀರಿನ ಬಗ್ಗೆ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮೇಕೆದಾಟು ಮಹಾದಾಯಿಗೆ, ಪರ್ಮಿಶನ್ ಕೊಡಿಸಲಿ ಕೇಂದ್ರದಿಂದ ಅವರು ಅನುಮತಿ ಕೊಡಿಸಲಿ.ವಿರೋಧ ಪಕ್ಷದ ನಾಯಕನ್ನು ಮಾಡಲಿಕ್ಕೇ ಆಗಲಿಲ್ಲ.ಗ್ಯಾರಂಟಿ ಯೋಜನೆಗಳು‌ ಜಾರಿಗೆ ಬಂದಿವೆ.ಅದಕ್ಕೆ ಅವರಿಗೆ ಸಹಿಸಲಿಕ್ಕೆ ಆಗ್ತಿಲ್ಲ.ನೂರು‌ ದಿನಗಳಲ್ಲಿ ಅಭಿವೃದ್ಧಿ ಮಾಡಿದ್ವಿ. ದೇಶದಲ್ಲಿ ಇಂತಹ ಪಕ್ಷ ಇದ್ದೀಯಾ?ಪ್ರತಿಭಟನೆ ಮಾಡುವುದಾದ್ರೆ ಮಾಡಲಿ ಬಿಡಿ,ವಿಪ್ರೊಂ ಸಂಸ್ಥೆಯ ಮುಖ್ಯಸ್ಥರ ಭೇಟಿ ವಿಚಾರ ವಿಪ್ರೋ ಸಂಸ್ಥೆ ದೇಶದ ಆಸ್ತಿ.ಸುಮಾರು ಉದ್ಯೋಗ ಸೃಷ್ಟಿ ಮಾಡಿದೆ.ಸರ್ಕಾರಕ್ಕೆ ಬರ್ಡನ್ ಕಡಿಮೆಯಾಗ್ತಿದೆ.ನಾವು ಅವರಿಗೆ ಎಲ್ಲಾ ಸಹಕಾರ ನೀಡ್ತೇವೆ.ನಾನು ಸಂಪೂರ್ಣ ಸಹಕಾರ ಕೊಡುತ್ತೇನೆ.ಗ್ರಾಮೀಣ ಶಿಕ್ಷಣದ ಬಗ್ಗೆ ಅವರ ಸಹಕಾರವಿದೆ.ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡ್ತೇವೆ.ಇನ್ನೂ ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋದಿಸಿ ಬಂದ್ ವಿಚಾರವಾಗಿ ಇದೊಂದು ರಾಜಕೀಯ ಕಾರಣದ ಬಂದ್ ,ಕಾಲೇಜು ಕುಮಾರಸ್ವಾಮಿ  ಬಜೆಟ್ ನಲ್ಲಿ ‌ಪಾಸ್ ಆಗಿತ್ತು.ಭೂಮಿ‌ಪೂಜೆ ವೇಳೆ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರವಾಯ್ತು.ರಾಮನಗರಕ್ಕೂ ಮೆಡಿಕಲ್ ಕಾಲೇಜು ಬೇಕು.ಆದ್ರೆ ರಾಜಕೀಯದಿಂದ  ಬಂದ್ ಕರೆಯುತ್ತಿದ್ದಾರೆ.ಜನರ ಮದ್ಯೆ ಜಗಳ ತಂದಿಡುವ ಕೆಲಸ ಮಾಡ್ತಿದ್ದಾರೆ.ಕುಮಾರಸ್ವಾಮಿ ಏನ್ ದಡ್ರಾ..? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ