ಬಹಳ ದೊಡ್ಡ ಮಟ್ಟದಲ್ಲಿ ಅಧಿಕಾರ ದುರುಪಯೋಗವಾಗ್ತಿದೆ ಹುಷಾರಾಗಿರಬೇಕು- ಡಿಕೆಶಿ

ಶುಕ್ರವಾರ, 25 ನವೆಂಬರ್ 2022 (15:03 IST)
ಕಾಂಗ್ರೇಸ್ ನಲ್ಲಿ ಟಿಕೆಟ್ ಗಾಗಿ ಫೈಟ್ ಇಂದು ವರ್ತೂರಿನಲ್ಲಿ ನಡೆಯುವ ಸಭೆ ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಬಿಜೆಪಿಯವರು ಯಾರು ಇಲ್ಲ ಅಂತ ಹೇಳುತ್ತಿದ್ದರು.ಕಾಂಗ್ರೆಸ್ ಪಕ್ಷ ದಿವಾಳಿ ಆಗ್ತಿದೆ ಅಂತ ಹೇಳಿದರು.ಈಗಾಗಲೇ ಸಾವಿರಾರು ಜನ ಅರ್ಜಿಯನ್ನು ಸಲ್ಲಿಸಿದ್ದಾರೆ.ಅವರು ಏನು ಅವರ ಹಿನ್ನೆಲೆ ಏನು ಪಕ್ಷಕ್ಕೆ ಅವರು ಯಾವ ರೀತಿಯಾದಂತಹ ಕೆಲಸ ಮಾಡಿದ್ದರೆ. ಇನ್ನು ಮುಂದೆ ಕೆಲಸ ಮಾಡಲು ಏನ್ ಯೋಜನೆಯನ್ನ ತಯಾರಿ ಮಾಡಿಕೊಂಡಿದ್ದಾರೆ.ಬಿಜೆಪಿಯವರು ವೋಟ್ ಅನ್ನು ಕಿತ್ತಾಕಬೇಕು ಅಂತ ಏನೇನ್ ಮಾಡ್ತಿದ್ದಾರೆ ಅಂತ ನಿಮಗೆ ಗೊತ್ತಿದೆ.ನೀವೇ ಪೇಪರ್ಗಳಲ್ಲಿ ಟಿವಿ ಗಳಲ್ಲಿ ತೋರಿಸಿದ್ದೀರಿ.ಸೋ ಅದಕ್ಕೆ ನಾವು ನಮ್ಮ ಜನಗಳಿಗೆ ಮುಂಜಾಗ್ರತೆಯನ್ನು ವಹಿಸಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಇನ್ನೂ ನಾವು ಬಹಳ ಹುಷಾರಾಗಿರಬೇಕು ಇರಬೇಕು.ಬಹಳ ದೊಡ್ಡ ರೀತಿಯಲ್ಲಿ ಅಧಿಕಾರ ದುರುಪಯೋಗ ಆಗ್ತಿದೆ.ಅದಕ್ಕೆ ನಮ್ಮ ಎಲ್ಲಾ ಅಭ್ಯರ್ಥಿಗಳಿಗೆಗಾಗಿ ಇವತ್ತು ರಾಹುಲ್ ಗಾಂಧಿಯವರು ಇಡೀ ದೇಶದಾದ್ಯಂತ ನಡೆಯುತ್ತಿದ್ದಾರೆ.ಅಭ್ಯರ್ಥಿಗಳು ಸಹ ಈ ಭಾರತ್ ಜೋಡು ಅನ್ನು ಹಳ್ಳಿಗಳಿಗೂ ತೆಗೆದುಕೊಂಡು ಹೋಗಬೇಕು.ಇಂತಹ ಎಲ್ಲ ವಿಚಾರಗಳನ್ನು ಸೂಚನೆ ಕೊಡುವುದಕ್ಕೆ ಆಹ್ವಾನಿಸಿದೀವಿ ಎಂದು ಡಿಕೆ ಶಿವಕುಮಾರ್ ಬಿಜೆಪಿ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ