ರಾಜ್ಯದಲ್ಲಿ ಸೂತಕದ ವಾತಾವರಣ ಇದೆ ಕಾಂಗ್ರೆಸ್ ಗೆ ಇದೆಲ್ಲಾ ಬೇಕಾ ..?
ರಾಜ್ಯದ ವಿವಿಧೆಡೆ ಮಳೆಯಿಂದಾಗಿ 13 ಜನ ಮೃತಪಟ್ಟಿದ್ದಾರೆ. ಮಳೆ, ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸರ್ಕಾರ ನೆರವು ನೀಡಲಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿಕೆ ನೀಡಿದರು. ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ ನೀಡಲಿದ್ದಾರೆ. ಮಳೆಯಿಂದಾಗಿ ಸಾವಿರಾರರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯಕ್ಕೆ ರಾಹುಲ್ ಗಾಂಧಿ ಬಂದಿದ್ದಾರೆ. ಸಿದ್ದರಾಮಯ್ಯ ಜನ್ಮದಿನ ಕಾರ್ಯಕ್ರಮ ಆಚರಿಸಿಕೊಳ್ತಿದ್ದಾರೆ. ಜನ್ಮದಿನ ಮಾಡಿಕೊಳ್ಳಲಿ, ನಾನು ಶುಭ ಕೋರುತ್ತೇನೆ. ರಾಜ್ಯದಲ್ಲಿ ಈಗ ಸೂತಕದ ವಾತಾವರಣ ಇದೆ. ಈ ಸಂದರ್ಭದಲ್ಲಿ ಸಂಭ್ರಮ ಬೇಕಿತ್ತಾ ಎಂದು ರವಿಕುಮಾರ್ ಪ್ರಶ್ನಿಸಿದರು. ನಾವು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ಆಯೋಜಿಸಿದ್ದೆವು. ಮಂಗಳೂರು ಘಟನೆ ನಡೆದ ಬಳಿಕ ರಾತ್ರಿ ಸುದ್ದಿಗೋಷ್ಟಿ ಕರೆದು ರದ್ದು ಮಾಡಿದೆವು. ಇಂದು 13ಜನ ಸಾವನ್ನಪ್ಪಿದ್ದಾರೆ, ಸಾವಿರಾರು ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಬಂದು ಸಂಭ್ರಮ ಆಚರಿಸಬೇಕಿತ್ತಾ. ಅದನ್ನು ಸ್ವಲ್ಪ ಯೋಚಿಸಲಿ ಎಂದರು.