ಪ್ರತಿಪಕ್ಷದೊಂದಿಗೆ ವಿಜಯೇಂದ್ರ ಹೊಂದಾಣಿಕೆಯ ಸಾಕ್ಷ್ಯಾಧಾರ ಇದೆ: ಯತ್ನಾಳ್‌ ಹೊಸ ಬಾಂಬ್

Sampriya

ಭಾನುವಾರ, 1 ಡಿಸೆಂಬರ್ 2024 (12:25 IST)
Photo Courtesy X
ಬೆಳಗಾವಿ: ಬಿಜೆಪಿ ರಾಜ್ಯ ಘಟದಕದ ವಿಜಯೇಂದ್ರ ವಿರೋಧ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡ ಬಗ್ಗೆ ಸಾಕ್ಷ್ಯಾಧಾರಗಳು ನನ್ನ ಬಳಿ ಇವೆ. ಸದ್ಯದಲ್ಲಿಯೇ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.

ನಾವು ವಕ್ಫ್ ಹೋರಾಟ ಮಾಡುತ್ತಿದ್ದೇವೆ ಹೊರತು ಯಡಿಯೂರಪ್ಪ ಕುಟುಂಬ, ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡುತ್ತಿಲ್ಲ. ಯಡಿಯೂರಪ್ಪ ಅವರ ಕುಟುಂಬ ದೇಶದಲ್ಲಿಯೇ ಪ್ರಾಮಾಣಿಕ ಕುಟುಂಬ, ವಿಜಯೇಂದ್ರ ಅಂತೂ ಅಪ್ಪಟ ಚಿನ್ನ, ಬಂಗಾರ ಎಂದು ಹೇಳಿದರೆ ಖುಷಿಯಾಗುತ್ತದೆ. ಅವರಿಗೆ ಭ್ರಷ್ಟಾಚಾರ ಎಂದರೆ ಗೊತ್ತಿಲ್ಲ ಎಂದು ಕಾಲೆಳೆದರು.

ವಿಜಯೇಂದ್ರ ಸದನದ ಬಾವಿಯಲ್ಲಿಯೇ ಡಿಕೆಶಿ ಅವರಿಂದ ಏನೇನು ಸಹಿ ಮಾಡಿಸಿಕೊಂಡರು. ಎಂಬುವ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಇಪ್ಪತ್ತು ಪತ್ರಗಳಿಗೆ ಸಹಿ ಮಾಡಿಸಿಕೊಂಡಿದ್ದೀರಿ, ವಿಡಿಯೋ ಬಿಡುಗಡೆ ಮಾಡಲಾ? ವಿಜಯೇಂದ್ರ ವಿರುದ್ಧ ಎಂದು ಗುಡುಗಿದರು.

ರಮೇಶ್ ಜಾರಕಿಹೊಳಿ ಅವರಿಗೆ ವಿಜಯೇಂದ್ರ ಅವರು ಏನು ಅನ್ಯಾಯ ಮಾಡಿದ್ದಾರೆ? ವಿಜಯೇಂದ್ರ ಅವರು ಯಾರ ಜೊತೆ ಸೇರಿಕೊಂಡು ರಮೇಶ್ ಅವರ ಮಾನ ಹರಾಜು ಹಾಕಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ರಮೇಶ್ ಅವರಿಗೆ ಮಾನಸಿಕ ಹಿಂಸೆ ನೀಡಿ ಅವರ ತೇಜೋವಧೆ ಮಾಡಿದ್ದು ಯಾರು? ಎಂಬುದನ್ನು ವಿಜಯೇಂದ್ರ ಹೇಳಲಿ. ಜಿ.ಎಂ. ಸಿದ್ದೇಶ್ವರ ಹಾಗೂ ಆರ್ ಅಶೋಕ್ ಅವರ ಬಗ್ಗೆ ವಿಜಯೇದ್ರ ಏನು ಹೇಳಿದ್ದಾರೆ? ಎಂಬುದರ ಬಗ್ಗೆಯೂ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.

ಇದು ನಮ್ಮ ಪಕ್ಷದ ಸ್ವಾರ್ಥದ ಹೋರಾಟವಲ್ಲ, ಪಕ್ಷವನ್ನು ಕಟ್ಟಿದ ಅನೇಕ ನಾಯಕರು ಅಧಿಕಾರ ಅನುಭವಿಸದೇ ಇದ್ದಾರೆ. ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರವನ್ನು ತೊಡೆದು ಹಾಕುವ ಬಿಜೆಪಿ ಪಕ್ಷವನ್ನು ಕಟ್ಟಬೇಕು ಎನ್ನುವುದು ಪ್ರಧಾನಿ ಮೋದಿಯವರ ಆಶಯವಾಗಿದೆ. ಆಶಯ ಈಡೇರಿಕೆಗಾಗಿ ಈ ಹೋರಾಟ ನಡೆದಿದೆ. ಭ್ರಷ್ಟಾಚಾರ ಮಾಡುವ ವ್ಯಕ್ತಿಗಳನ್ನು ದೂರವಿಟ್ಟು, ಪ್ರಾಮಾಣಿಕ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ