ಈ ಬಜೆಟ್ ನಲ್ಲಿ ಖಾರನೂ ಇಲ್ಲ ಶಕ್ತಿಯೂ ಇಲ್ಲ.-ಡಿಕೆ ಶಿವಕುಮಾರ್

ಗುರುವಾರ, 5 ಮಾರ್ಚ್ 2020 (13:25 IST)
ಬೆಂಗಳೂರು : ಇಂದು ಸಿಎಂ ಯಡಿಯೂರಪ್ಪ 2020-21 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು ಈ ಬಗ್ಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.


ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿರ್ಚಿ ಮಂಡಕ್ಕಿಯಲ್ಲಿ ಉಪ್ಪು ಖಾರ ಇರುತ್ತೆ ಆದ್ರೆ ಈ ಬಜೆಟ್ ನಲ್ಲಿ ಖಾರನೂ ಇಲ್ಲ ಶಕ್ತಿಯೂ ಇಲ್ಲ. ಹುರುಪಿನಲ್ಲಿ ಸರ್ಕಾರ ಮಾಡಿದ್ರು, ಅದರಂತೆ ಬಜೆಟ್ ಇಲ್ಲ ಎಂದು ಕಿಡಿಕಾರಿದ್ದಾರೆ.


ಕೇಂದ್ರ ಸರ್ಕಾರದ್ದೇ ದುರ್ಬಲ ಬಜೆಟ್ ಅಂದುಕೊಂಡಿದ್ದೆ. ಆದರೆ ಅದಕ್ಕಿಂತ ಇದು ದುರ್ಬಲ ಬಜೆಟ್. ರಾಜ್ಯಕ್ಕೂ ಶಕ್ತಿ ಕೊಡಲಿಲ್ಲ, ಜನರಿಗೂ ಶಕ್ತಿ ಕೊಡಲಿಲ್ಲ. ಇದು ರಾಜ್ಯದ ಜನತೆಗೆ ದೊಡ್ಡ ಅನ್ಯಾಯ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ