ಸುದ್ದಿಯಲ್ಲಿ ಇರೋದಕ್ಕೆ ಏನೇನೋ ಹೇಳ್ತಿದ್ದಾರೆ
50 ರಿಂದ 60 ಜನರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ ಸೇರಬಹುದು ಎಂಬ ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
50 ರಿಂದ 60 ಜನರ ಬೆಂಬಲ ಇದ್ರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಸಿಎಂ ಆಗ್ತಾರೆ.. ಸುಮ್ಮನೆ ಸುದ್ದಿಯಲ್ಲಿ ಇರೋದಕ್ಕೆ ಮಾಜಿ ಸಿಎಂ H.D.ಕುಮಾರಸ್ವಾಮಿ ಏನೇನೋ ಮಾತಾಡ್ತಾರೆ ಎಂದು ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಲೋಕಸಭೆ ಚುನಾವಣೆ ಮುಂಚೆ ಜೆಡಿಎಸ್ ಅಸ್ತಿತ್ವ ಏನಾಗಲಿದೆ ಎಂಬುದರ ಬಗ್ಗೆ ಕಾಳಜಿ ವಹಿಸಿದ್ರೆ ಒಳ್ಳೆಯದು.. ಜೆಡಿಎಸ್ ಈಗಾಗಲೇ ಅಸ್ತಿತ್ವ ಕಳೆದುಕೊಂಡಿದೆ.. ಜನರು ಸಹ ಅವರ ಜೊತೆ ಇಲ್ಲ. ದಳ ಒಡೆದು ಹೋಗಿದೆ. ಜೆಡಿಎಸ್ ಬಿಜೆಪಿ ಜೊತೆ ಸೇರಿ ಜಾತ್ಯಾತೀತ ತತ್ವ ಕಳೆದುಕೊಂಡಿದೆ ಎಂದು ಹೇಳಿದ್ರು