ನಮ್ಮ ಬತ್ತಳಿಕೆಯಲ್ಲಿ ಏನಿದೆ ಎಂದು ಅವರಿಗೆ ಗೊತ್ತಿದೆ- ಡಿಕೆ ಶಿವಕುಮಾರ್

geetha

ಶುಕ್ರವಾರ, 23 ಫೆಬ್ರವರಿ 2024 (21:00 IST)
ಬೆಂಗಳೂರು-ವಿಧಾನಸೌಧದಲ್ಲಿ  ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್ ಅವರು ಎಲ್ಲಿ ನಿರ್ಣಯ ಮಂಡಿಸಿದ್ರು? ಹೌಸ್ ಆರ್ಡರ್ ನಲ್ಲಿ ಇರಲಿಲ್ಲ.ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಒಟ್ಟಿಗೆ ಹೋರಾಟ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ರು.ನಮ್ಮ ತೆರಿಗೆ, ನಮ್ಮ ಹಕ್ಕು, ನಮ್ಮ ಪಾಲು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಇನ್ನೂ ನಿನ್ನೆ ಕುಮಾರಸ್ವಾಮಿ ಅಮಿತ್ ಷಾ ಭೇಟಿ ವಿಚಾರವಾಗಿ ಅವರು ಏನು  ಚರ್ಚೆ ಮಾಡಿದ್ರು ಎಂಬ ಅರಿವಿದೆ.ಎಲ್ಲಾ ಪಕ್ಷಗಳ ಮೇಲೆ ನಮಗೆ  ನಿಗಾ ಇದೆ.ನಮ್ಮ ಬತ್ತಳಿಕೆಯಲ್ಲಿ ಏನಿದೆ ಎಂದು ಅವರಿಗೆ  ಗೊತ್ತಿದೆ .ಯಾರ್ಯಾರನ್ನ ಸಂಪರ್ಕ ಮಾಡುತ್ತಿದ್ದಾರೆ ಎಂದು ಗೊತ್ತಿದೆ.ಅವರ ಬತ್ತಳಿಕೆಯಲ್ಲಿ ಏನಿದೆ ಎಂದೂ ನಮಗೂ ಗೊತ್ತಿದೆ.ಶಾಸಕಾಂಗ ಪಕ್ಷದ ಸಭೆಯನ್ನ ಸೋಮವಾರ ಅಧಿವೇಶನದ ನಂತರ ಖಾಸಗಿ ಹೋಟಲ್ ನಲ್ಲಿ ಕರೆಯಲಾಗಿದೆ.ಮಾಕ್ ಓಟಿಂಗ್ ಕೂಡ ನಡೆಸ್ತೇವೆ.ಜನಾರ್ಧನ ರೆಡ್ಡಿ ಸೇರಿದಂತೆ ಎಲ್ಲಾ ಶಾಸಕರನ್ನ ಸಂಪರ್ಕ ಮಾಡ್ತೇವೆ.ಯಾರ್ಯಾರು ಸಂಪರ್ಕದಲ್ಲಿ ಇದಾರೆ ಎಂಬ ಬಗ್ಗೆ ಯಾವುದನ್ನೂ ಬಹಿರಂಗ ಮಾಡಲ್ಲ.ಅವರ ಹೆಸರು ತೆಗೆಡುಕೊಳ್ಳಲ್ಲ‌ ಎಂದ ಡಿಸಿಎಂ ಶಿವಕುಮಾರ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ