ಮಂಗಳಮುಖಿಯ ಮನೆಯನ್ನೂ ದೋಚಿದ ಕಳ್ಳ ..!

ಸೋಮವಾರ, 26 ಡಿಸೆಂಬರ್ 2022 (18:35 IST)
ಸಮಾಜಕ್ಕೆ ವೃತ್ತಿಪರ ಕಳ್ಳರೇ ಡೇಂಜರಸ್ . ಹೀಗಾಗಿ ಅವರನ್ನೇ ಟಾರ್ಗೇಟ್ ಮಾಡಿ ಅವರ ಮತ್ತಷ್ಟು ಕೃತ್ಯಗಳನ್ನ ಬಯಲು ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಲ್ಲಿ ಸಿಕ್ಕಿಬಿದ್ದವರ  ಕಳ್ಳರ ಪೈಕಿ  ಮಂಗಳಮುಖಿಯರ ಮನೆಯನ್ನೂ ಬಿಡದೆ ದೋಚಿದ ಕಳ್ಳನೂ ಸೇರಿದ್ದಾನೆ .‌ಆಗ್ನೇಯ ವಿಭಾಗದ ಪೊಲೀಸರು ಸ್ಪೆಷಲ್ ಡ್ರೈವ್ ಕೈಗೊಂಡು ಒಂದಷ್ಟು ಹ್ಯಾಬಿಚುವೆಲ್ ಅಫೆಂಡರ್ಸ್ ಗಳನ್ನ ಮತ್ತೆ ಬಂಧಿಸಿದ್ದಾರೆ. ಕಳ್ಳತನದ ರುಚಿ ಹತ್ತಿಸಿಕೊಂಡ ಖದೀಮರು ಸಿಕ್ಕಿಬಿದ್ದು ಜೈಲಿಗೆ ಹೋಗಿ ಮತ್ತೆ ವಾಪಾಸ್ ಬಂದು ಮತ್ತದೇ ಕೃತ್ಯಗಳಲ್ಲಿ ತೊಡಗಿರುವವರನ್ನ ಎಳೆ ತಂದು ಒಟ್ಟು 16‌ಕೋಟಿ ಮೌಲ್ಯದ 1208 ಗ್ರಾಂ ಚಿನ್ನಾಭರಣ ಹಾಗು ಬೆಳ್ಳಿ ಪದಾರ್ಥವನ್ನ ವಶಕ್ಕೆ ಪಡೆಯಲಾಗಿದೆ. ಹುಳಿಮಾವು , ಬೊಮ್ಮನಹಳ್ಳಿ , ಮೈಕೋಲೇಔಟ್ , ತಿಲಕ್ ನಗರ , ಪರಪ್ಪನ ಅಗ್ರಹಾರ,  ಆಡುಗೋಡಿ  ಪೊಲೀಸರ ಕಾರ್ಯಾಚರಣೆ ಇದಾಗಿದ್ದು , ಆಸೀಫ್ @ ಟೈಗರ್ ಜಬಿ , ಹನುಮಂತ , ಕಿರಣ್ ಕುಮಾರ್ , ಶರಣಪ್ಪ , ಸಂತೋಷ್ @ ಎಮ್ಮೆ ಎಂಬುವವರು ಸೇರಿ ಒಟ್ಟು 17 ಆರೋಪಿಗಳನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಸರ್ವಿಸ್ ಪ್ರೊವೈಡರ್ ಹೆಸರಿನಲ್ಲಿ ಕೂಡ ವ್ಯಕ್ತಿಯೊಬ್ಬ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ವೃದ್ಧರನ್ನ ನೋಡಿಕೊಳ್ಳೊದಾಗಿ ಸರ್ವಿಸ್ ಪ್ರೋವೈಡರ್ ಮೂಲಕ ಸೇವೆ ಸಲ್ಲಿಸುವ ನೆಪದಲ್ಲಿ ಮನೆಯ ಬಗ್ಗೆ ಕೂಲಂಕುಷವಾಗಿ ನೋಡಿ ಕಳ್ಳತನ ಮಾಡ್ತಿದ್ದ ಆರೋಪಿಯನ್ನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಪಿಯೂಸಿ ಓದಿಕೊಂಡಿದ್ದ ಯುವಕನಿಂದ ಈ ಕೃತ್ಯ ನಡೆದಿದ್ದು ,ಸೀನೀಯರ್ ಸಿಟಿಝನ್ ಮನೆಯಿಂದ ಕದ್ದಿದ್ದ 500 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಇನ್ನು ಆಡುಗೋಡಿಯಲ್ಲಿ ಕೂಡ ಶಿವ ಹಾಗು ಸಮೀರ್ ಎಂಬಿಬ್ಬರನ್ನ ಬಂಧನ ಮಾಡಲಾಗಿದೆ.  ಪುಖಂಬಮ್ ಪ್ರಶಾಂತ ಎಂಬ ಮಂಗಳಮುಖಿಯ ಮನೆಯಲ್ಲಿ ಆರೋಪಿಗಳು ಆಕೆಯ ಡೆಬಿಟ್ ಕಾರ್ಡ್ ನಿಂದ  ಐದು ಲಕ್ಷ  ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ . ಬ್ಯೂಟಿಷಿಯನ್ ಆಗಿ ಕೆಲಸ ಮಾಡ್ತಿದ್ದ ಪುಖಂಬಮ್ ,ಪಾರ್ಟ್ ಟೈಂ ಬಿಸಿನೆಸ್ ಎಂದು ಮಸಾಜ್ ಕೂಡ ಮಾಡ್ತಿದ್ದಳು. ಆನ್ ಲೈನ್ ನಲ್ಲಿ ಮಸಾಜ್ ಆ್ಯಡ್ ನೀಡಿ ಮಸಾಜ್ ಮಾಡಿ ಹೊಟ್ಟೆ ಪಾಡಿಗಾಗಿ ಹಣ ಗಳಿಸುತ್ತಿದ್ದಳು ಈ ವೇಳೆ ಸಮೀರ್ ಎಂಬಾತನಿಂದ ಶಿವ ಪರಿಚಯವಾಗಿದ್ದ. ಆತ ಮೂರ್ನಾಲ್ಕು ಬಾರಿ ಆಕೆಯಿಂದ ಮಸಾಜ್ ಮಾಡಿಸಿಕೊಂಡಿದ್ದ ಈ ವೇಳೆ ಆಕೆಯ ಡೆಬಿಟ್ ಕಾರ್ಡನ್ಬು ಕದ್ದು ಹಲವು ಬಾರಿ ಅಕೌಂಟ್ ಗೆ ಕನ್ನ ಹಾಕ್ತಿದ್ದ. ಕಟ್ ಆಗ್ತಿದ್ದ ಹಣದ ಬಗ್ಗೆ ಆಕೆಗೆ ತಿಳಿದಿರಲಿಲ್ಲ. ನಂತರ ಅಕೌಂಟ್ ಪರಿಶೀಲನೆ ನಡೆಸಿದಾಗ ಅಸಲಿ ಸಂಗತಿ ಹೊರ ಬಿದ್ದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ