ಆಂದ್ರ‌, ತೆಲಂಗಾಣ ಗಡಿಯಲ್ಲಿ ಮದ್ಯದಂಗಡಿ ತೆರೆಯಲು ಚಿಂತನೆ!

geetha

ಶುಕ್ರವಾರ, 23 ಫೆಬ್ರವರಿ 2024 (18:00 IST)
ಬೆಂಗಳೂರು : ಕಾಂಗ್ರೆಸ್‌ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ನೇತೃತ್ವದ ಸಮಿತಿ ಈ ಕುರಿತು ಸರ್ಕಾರಕ್ಕೆ ವರದಿ ನೀಡಿದ್ದು, ಅಗ್ಗದ ಸೇಂದಿಯ ಸೇವನೆಯಿಂದಾಗಿ ಗಡಿ ಪ್ರದೇಶದ ಜನರು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಉಲ್ಲೇಖಿಸಿದೆ. ಕರ್ನಾಟಕ ರಾಜ್ಯದ ಆಂಧ್ರ ಮತ್ತು ತೆಲಂಗಾಣ ಗಡಿ ಪ್ರದೇಶಗಳಲ್ಲಿ ಎಂಎಸಐಎಲ್‌ ಮದ್ಯದಂಗಡಿಗಳನ್ನು ತೆರೆಯಲು ಶಾಸಕಾಂಗ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. 
 
ಹರಿಜನ ಮತ್ತು ಗಿರಿಜನ ಕಲ್ಯಾಣ ಸಮಿತಿ ಮತ್ತೊಂದು ವರದಿ ನೀಡಿದ್ದು‌,  ಮದ್ಯಕ್ಕೆ ಬೇಡಿಕೆಯಿರುವ ಹಳ್ಳಿಗಳಲ್ಲಿ ಎಂಎಸ್‌ಐಎಲ್‌ ಮಳಿಗೆಗಳನ್ನು ಸ್ಥಾಪಿಸಲು ಸಲಹೆ ನೀಡಿದೆ. ಈ ಕುರಿತು ಅಧಿವೇಶನದಲ್ಲಿಯೂ ಸಹ ಚರ್ಚೆ ನಡೆಸಲಾಗಿತ್ತು. ಹಲವೆಡೆ ಗ್ರಾಮದ ಮದ್ಯಭಾಗದಲ್ಲೇ ಎಂಎಸ್‌ಐಎಲ್‌ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಜನರಿಗೆ ಅನಾನುಕೂಲವಾಗುತ್ತಿದೆ ಎಂದು ಶಾಸಕಾಂಗ ಸಮಿತಿಯ ವರದಿಯಲ್ಲಿ ಹೇಳಲಾಗಿದ್ದು, ಅಂತಹ ಮಳಿಗೆಗಳನ್ನು ಹಳ್ಳಿಯಿಂದ ಹೊರಗೆ ಸ್ಥಳಾಂತರಿಸಬೇಕು ಎಂದಿದೆ. ಜೊತೆಗೆ ಕೇಂದ್ರ ಸರ್ಕಾರದ ಜನೌಷಧಿ ಮಳಿಗೆಗಳನ್ನು ಹಳ್ಳಿಗಳಲ್ಲಿ ಸ್ಥಾಪಿಸಬೇಕಿರುವ  ಅವಶ್ಯಕತೆಯನ್ನು ಒತ್ತಿ ಹೇಳಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ