ಬೆಳ್ಳಂ ಬೆಳಗ್ಗೆ ಐಟಿ ಅಧಿಕಾರಿಗಳ ವಿರುದ್ಧ ಡಿಕೆಶಿ ಗರಂ

ಶುಕ್ರವಾರ, 4 ಆಗಸ್ಟ್ 2017 (07:26 IST)
ಸತತ 3ನೇ ದಿನವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಐಟಿ ಅಧಿಕಾರಿಗಳ ಡ್ರಿಲ್ ಮುಂದುವರೆದಿದೆ. ರಾತ್ರಿ 11.30ರ ಸುಮಾರಿಗೆ ವಿಚಾರಣೆ ಸ್ಥಗಿತಗೊಳಿಸಿ ಮಲಗಲು ಅವಕಾಶ ಕೊಟ್ಟಿದ್ದ ಅಧಿಕಾರಿಗಳು ಇವತ್ತು ಬೆಳ್ಳಂಬೆಳಗ್ಗೆ ವಿಚಾರಣೆ ಆರಂಭಿಸಿದ್ದಾರೆ.

ಈಗಾಗಲೇ ಡಿಕೇಶಿ ಮನೆಯಲ್ಲಿದ್ದ 4 ಲಾಕರ್`ಗಳನ್ನ ಓಪನ್ ಮಾಡಿರುವ ಅಧಿಕಾರಿಗಳು ಉಳಿದಿರುವ ಮತ್ತೊಂದು ಲಾಕರ್ ಪಾಸ್ ವರ್ಡ್ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗ್ಗೆ 5.30ರಿಂದಲೇ ಐಟಿ ವಿಚಾರಣೆ ಆರಂಭವಾಗಿದ್ದು, ಅಧಿಕಾರಿಗಳ ಡಿಕೆಶಿ ಗರಂ ಆಗಿದ್ದಾರೆಂದು ತಿಳಿದು ಬಂದಿದೆ. ಇವತ್ತು ಸಂಜೆ ವೇಳೆಗೆ ದಾಖಲೆಗಳ ಪರಿಶೀಲನೆ ಅಂತ್ಯವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇತ್ತ, ಡಿಕೆಶಿ ಆಪ್ತ ದ್ವಾರಕಬಾಥ್ ನಿವಾಸದಲ್ಲಿನ ಐಟಿ ತನಿಖೆ ಬಹುತೇಕ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ. ಬೆಳಗಿನ ಜಾವ ಒಂದು ಸೂಟ್ ದಾಖಲೆ ಮತ್ತು ಕೆಲ ಸಂಪತ್ತಿನೊಂದಿಗೆ ಅಧಿಕಾರಿಗಳು ತೆರಳಿದ್ದಾರೆ ಎನ್ನಲಾಗಿದೆ. ಅತ್ತ, ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಮಾವ ತಿಮ್ಮಯ್ಯನವರ ನಿವಾಸದಲ್ಲೂ ತನಿಖೆ ಮುಂದುವರೆದಿದೆ.

ವೆಬ್ದುನಿಯಾವನ್ನು ಓದಿ