ಸರಕಾರಕ್ಕೆ ನೆರೆ ಸಂತ್ರಸ್ಥರಿಂದ ಈ ಮನವಿ

ಸೋಮವಾರ, 26 ಆಗಸ್ಟ್ 2019 (19:00 IST)
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಸುಮಾರು 10 ಗ್ರಾಮಗಳ ನೆರೆ ಸಂತ್ರಸ್ತರು ಕಾಗವಾಡ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಕಾಗವಾಡ ತಾಲೂಕಿನ ಮಂಗಾವತಿ, ಜುಗೊಳ, ಶಾಹಪುರ, ಶಿರಗುಪ್ಪಿ, ಉಗಾರ ಮೋಳವಾಡ, ಕುಸನಾಳ, ಕೃಷ್ಣಾ ಕಿತ್ತೂರ ಮತ್ತು ಬನಜವಾಡ ಗ್ರಾಮಗಳು ಸೇರಿದಂತೆ ಕೃಷ್ಣಾ ನದಿ ತೀರದ ಗ್ರಾಮಗಳು ಸಂಪೂರ್ಣವಾಗಿ ಜಲಾವೃತ ವಾಗಿವೆ.

ಮನೆ ಹಾನಿ, ಜೀವ ಹಾನಿ, ಮಕ್ಕಳ ಶಿಕ್ಷಣ ಹಾನಿ ಆಗಿದೆ. ಸರಕಾರ ಪ್ರತಿ ಪಡಿತರ ಕುಟುಂಬಕ್ಕೆ  1 ಲಕ್ಷ ರೂ.  ಪರಿಹಾರ ಸಹಾಯ ಧನ ನೀಡಬೆಕು. ಹಾಳಾದ ಮನೆಗಳಿಗೆ ಪುನಾರಚನೆ ಮಾಡಬೇಕು.

ಸಂಪೂರ್ಣ ಬೇಳೆ ನಾಶವಾಗಿದ್ದು ಪ್ರತಿ ಎಕರೆಗೆ 1 ಲಕ್ಷ ಸಹಾಯಧನ ಮತ್ತು ಮಕ್ಕಳ ಶಿಕ್ಷಣ ಸಂಪೂರ್ಣ ಫ್ರೀ ಕೋಡಿಸಬೇಕು ಎಂದು ಆಗ್ರಹಿಸಿದ್ರು. ಮನವಿ ಪತ್ರವನ್ನು ನೆರೆ ಸಂತ್ರಸ್ಥರು ಕಾಗವಾಡ ತಹಸೀಲ್ದಾರ್ ಮುಖಾಂತರ ಸರಕಾರಕ್ಕೆ ಸಲ್ಲಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ