ಆ ವಿಷಯದಲ್ಲಿ ಈ ಜಿಲ್ಲೆಗೆ ಮೊದಲ ಸ್ಥಾನ

ಶುಕ್ರವಾರ, 10 ಜುಲೈ 2020 (15:09 IST)
ಮೊದಲ‌ ಬಾರಿಗೆ ಸಮುದಾಯದ ಜನರಿಗಾಗಿ ನೇರ ಉದ್ಯೋಗ ಸಾಲ ಯೋಜನೆ ಆರಂಭಿಸಿದ್ದು, ಫಲಾನುಭವಿಗಳ‌ ಪಟ್ಟಿಯಲ್ಲಿ ರಾಜ್ಯದ ಈ ಜಿಲ್ಲೆ ಪ್ರಥಮ‌ ಸ್ಥಾನದಲ್ಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳೆದ ವರ್ಷ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮವನ್ನು ಆರಂಭಿಸಿದ್ದು ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಮೊದಲ‌ ಬಾರಿಗೆ ಸಮುದಾಯದ ಜನರಿಗಾಗಿ ನೇರ ಉದ್ಯೋಗ ಸಾಲ ಯೋಜನೆ ಆರಂಭಿಸಿದ್ದು, ಫಲಾನುಭವಿಗಳ‌ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆ ಪ್ರಥಮ‌ ಸ್ಥಾನದಲ್ಲಿದೆ ಎಂದು ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಹೇಳಿದ್ದಾರೆ.

ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಜಾರಿಗೊಳಿಸಿದ್ದು, ಸಮುದಾಯದ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣಕ್ಕೆ ಶೇಕಡಾ 2 ರ ಬಡ್ಡಿ ದರದಲ್ಲಿ ಲಕ್ಷ ಮಿತಿಗೆ ನಿಗಮವು ಸಾಲ ನೀಡುತ್ತದೆ. ನಾಲ್ಕು ವರ್ಷಗಳ ನಂತರ ಮರುಪಾವತಿ ಅವಧಿ ಆರಂಭವಾಗುತ್ತದೆ.
ಇನ್ನೊಂದು ಮಹತ್ವದ ಯೋಜನೆ ಎಂದರೆ‌ ನೇರ ಉದ್ಯೋಗ ಸಾಲ ಯೋಜನೆ. ಈ ಯೋಜನೆಯಡಿ ಸಮುದಾಯದ ಜನರ ಉದ್ಯೋಗಕ್ಕಾಗಿ ಶೇಕಡಾ 4 ರ ಬಡ್ಡಿ ದರದಲ್ಲಿ ಲಕ್ಷ ರೂ. ಮಿತಿಗೆ ಸಾಲ ನೀಡಲಾಗುತ್ತದೆ ಎಂದಿದ್ದಾರೆ.

ಈ‌ ಯೋಜನೆಯ ಪ್ರಯೋಜನ ಪಡೆಯಲು ರಾಜ್ಯಾದ್ಯಂತ 1,650 ಜನರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 1,150 ಜನ ಫಲಾನುಭವಿಗಳನ್ನು‌ ಆಯ್ಕೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ 392 ಅರ್ಜಿಗಳ ಪೈಕಿ 97 ಜನ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ