ರಾಜ್ಯದ ಈ ಜಿಲ್ಲೆ ಕೊರೊನಾ ನಿಯಂತ್ರಿಸಿ ಆಗಿದೆ ದೇಶಕ್ಕೆ ಮಾದರಿ

ಗುರುವಾರ, 9 ಏಪ್ರಿಲ್ 2020 (19:16 IST)
ಕೋವಿಡ್ – 19 ನಿಯಂತ್ರಿಸುವಲ್ಲಿ ಯಶಸ್ಸು ಸಾಧಿಸಿರುವ ರಾಜ್ಯದ ಜಿಲ್ಲೆಯೊಂದು ಇಡೀ ದೇಶಕ್ಕೆ ಮಾದರಿಯಾಗಿದೆ.

ಕೋವಿಡ್-19 ಸೋಂಕು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಲ್ಲಿ ತುಮಕೂರು ನಗರ ಮಾದರಿಯಾಗಿದ್ದು, ಸ್ಮಾರ್ಟ್ ಸಿಟಿ ಅಭಿಯಾನದಡಿ ಕ್ವಾರೆಂಟೈನ್ ಮೇಲೆ ಕಣ್ಗಾವಲು ಹಾಕುವ, ಅವರ ಚಟುವಟಿಕೆಗಳನ್ನು ಸಮಗ್ರವಾಗಿ ಪರಿಶೀಲಿಸುವ ಸ್ಮಾರ್ಟ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೇಶಕ್ಕೇ ಮಾದರಿಯಾಗಿದೆ. ಹೀಗಂತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ ವಾಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್ ತಿಳಿಸಿದ್ದಾರೆ.

 ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಡುವ ಸೂರತ್ ಮತ್ತು ಪುಣೆ ನಗರಗಳು ಸಹ ಇದೇ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಹೋಂ ಕ್ವಾರೆಂಟೈನ್‌ನಲ್ಲಿರುವವರ ನಿರ್ವಹಣೆ, ನಿಗಾ, ಪತ್ತೆ ಹಚ್ಚುವ, ಮಾಹಿತಿ ಪ್ರಸರಣ, ತರಬೇತಿ ನೀಡುವ, ವಿಶ್ಲೇಷಣೆ ಮಾಡುವ, ಕೌನ್ಸಿಲಿಂಗ್ ಸೌಲಭ್ಯ ಮತ್ತಿತರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ದಿಗ್ಬಂಧನದಲ್ಲಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ