ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಸಾರಿಗೆ ನೌಕರರಿಗೆ ಸಿಗುತ್ತೆ ಈ ವಿಶೇಷ ಸೌಲಭ್ಯ

ಭಾನುವಾರ, 30 ಜೂನ್ 2019 (08:13 IST)
ಬೆಂಗಳೂರು : ಜನಸಂಖ್ಯೆ  ನಿಯಂತ್ರಣಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆ.ಎಸ್.ಆರ್.ಟಿ.ಸಿ.) ಕೂಡ ಮುಂದಾಗಿದ್ದು, ಅದಕ್ಕಾಗಿ ತನ್ನ ನೌಕರರಿಗೆ ವಿಶೇಷ ಸೌಲಭ್ಯವನ್ನು ನೀಡಲು ನಿರ್ಧರಿಸಿದೆ.




ಹೌದು. ಒಂದು ಅಥವಾ ಎರಡು ಜೀವಂತ ಮಕ್ಕಳನ್ನು ಹೊಂದಿರುವ ಸಾರಿಗೆ ನೌಕರ ಅಥವಾ ಆತನ ಪತ್ನಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಅವರಿಗೆ ವೇತನ ಬಡ್ತಿಯನ್ನೂ ನೀಡುವ 'ಆಫ‌ರ್‌' ಅನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ ಆರ್‌ ಟಿಸಿ) ಜಾರಿಗೆ ತಂದಿದೆ.


ಈ ಸೌಲಭ್ಯ ಪಡೆಯುವ ನೌಕರ ಅಥವಾ ಆತನ ಪತ್ನಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕಿದೆ. ಅಲ್ಲದೆ, ಈ ವೇತನ ಬಡ್ತಿಯನ್ನು ವೇತನ ಶ್ರೇಣಿಯ ವೈಯಕ್ತಿಕ ವೇತನವನ್ನಾಗಿ ಪರಿಗಣಿಸುವುದರ ಜತೆಗೆ ಪೂರ್ಣ ಸೇವಾವಧಿವರೆಗೂ ನೀಡಲಾಗುತ್ತದೆ. ಈ ಸಂಬಂಧ ಕೆಎಸ್‌ ಆರ್‌ ಟಿಸಿಯು ಸುತ್ತೋಲೆ ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ