ಇದು ಪಾದಯಾತ್ರೆಯಲ್ಲ, ಕಲಹ ಯಾತ್ರೆ: ಜೆಡಿಎಸ್‌, ಪ್ರೀತಂ ಬೆಂಬಲಿಗರ ಘರ್ಷಣೆ ಬಗ್ಗೆ ಕಾಂಗ್ರೆಸ್ ಲೇವಡಿ

Sampriya

ಬುಧವಾರ, 7 ಆಗಸ್ಟ್ 2024 (18:47 IST)
ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವುದು ಪಾದಯಾತ್ರೆಯಲ್ಲ ಕಲಹ ಯಾತ್ರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಮುಡಾ, ವಾಲ್ಮೀಕಿ ಹರಗಣ ವಿರೋಧಿಸಿ ವಿಪಕ್ಷ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಇಂದು  ಜೆಡಿಎಸ್ ಕಾರ್ಯಕರ್ತರು ಹಾಗೂ ಪ್ರೀತಂ ಗೌಡ ಬೆಂಬಲಿಗರು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ. ಇಂದಿನ ಪಾದಯಾತ್ರೆಯಲ್ಲಿ ಪ್ರೀತಂಗೌಡ ಅವರು ಪಾಲ್ಗೊಂಡ ವೇಳೆ ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಇದಕ್ಕೆ ಕೌಂಟರ್ ಕೊಟ್ಟ ಜೆಡಿಎಸ್ ಕಾರ್ಯಕರ್ತರು ದೇವೇಗೌಡರ ಪರ ಘೋಷಣೆ ಕೂಗಿದ್ದಾರೆ.

ನಂತರ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ವಾಗ್ವಾದ ತಾರಕಕ್ಕೆ ಏರಿ ರಸ್ತೆಯಲ್ಲಿ ಪರಸ್ಪರ ಕೈ ಕೈ ಮಿಲಾಯಿಸಿದರು.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವುದು ಪಾದಯಾತ್ರೆಯಲ್ಲ ಕಲಹ ಯಾತ್ರೆ!

ಉಭಯ ಪಕ್ಷಗಳ ನಾಯಕರು ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ನಡೆಸುತ್ತಿರುವ ಈ ಪಾದಯಾತ್ರೆಯಲ್ಲಿ ಮೊದಲ ದಿನದಿಂದಲೂ ಕಲಹ ಯಾತ್ರೆಯಾಗಿದೆ.

ಒಂದೆಡೆ ಒಕ್ಕಲಿಗ ನಾಯಕರು vs ವಿಜಯೇಂದ್ರ ನಡುವಿನ
#BJPvsBJP ಕಲಹ, ಮತ್ತೊಂದೆಡೆ ಯತ್ನಾಳ್ ಟೀಮ್ vs ವಿಜಯೇಂದ್ರ ಟೀಮ್ ಕಲಹ.
ಇದ್ಕಕಿಂತಲೂ ಮಿಗಿಲಾಗಿ #JDSvsBJP ಕಲಹ.

ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಇಂದು ನಡೆದ ಘರ್ಷಣೆಯು ಈ ಪಾದಯಾತ್ರೆಯು ಮೈತ್ರಿಯ ಅಂತಿಮಯಾತ್ರೆಗೆ ಮುನ್ನುಡಿ ಬರೆಯುವುದನ್ನು ಖಚಿತಪಡಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ