ಗಡಿಯಲ್ಲಿ ಲಾಕ್ ಆದವರು ಕರಾವಳಿಗೆ ವಾಪಸ್ ಆಗಿದ್ದು ಹೇಗೆ?

ಗುರುವಾರ, 21 ಮೇ 2020 (20:56 IST)
ಗಡಿಯಲ್ಲಿ ಲಾಕ್ ಆದ ಕರಾವಳಿಗರು ಕೊನೆಗೂ ವಾಪಸ್ ಆಗಿದ್ದಾರೆ.

ಬೆಳಗಾವಿಯ ನಿಪ್ಪಾಣಿಯಲ್ಲಿ ಕಳೆದ ಎರಡು ದಿನಗಳಿಂದ ಸಿಲುಕಿದ್ದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಗರಿಗೆ ಇದೀಗ ತಮ್ಮ ತಮ್ಮ ಜಿಲ್ಲೆಗೆ ಆಗಮಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಮುಕ್ತ ಅವಕಾಶ ಸಿಕ್ಕಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ 7 ತಿಂಗಳ ಗರ್ಭಿಣಿ ಸೇರಿದಂತೆ ಸುಮಾರು 30 ಜನರು ಹೊರಟಿದ್ದರು.  ಇವರೆಲ್ಲಾ ಸೇವಾ ಸಿಂಧು ಪಾಸ್ ಇಲ್ಲದ ಕಾರಣ ಬೆಳಗಾವಿಯ ನಿಪ್ಪಾಣಿಯಲ್ಲಿ ಲಾಕ್ ಆಗಿದ್ದರು. 

ಈ ಕುರಿತು ಸಚಿವ ಬಸವರಾಜ ಬೊಮ್ಮಾಯಿ, ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ನಾನು ಅವರು ಸಿಎಂ ಗಮನಕ್ಕೆ ತಂದಿದ್ದೆವು. ಇದೀಗ ಸಿಎಂ ಹಸಿರು ನಿಶಾನೆ ತೋರಿದ್ದು, ನಿಪ್ಪಾಣಿಯಲ್ಲಿ ಸಿಲುಕಿ ಹಾಕಿಕೊಂಡಿದ್ದವರು ತಮ್ಮ ತಮ್ಮ ಜಿಲ್ಲೆಗೆ ಬರಲು ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ