ಬಾದಾಮಿ: ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವು

ಭಾನುವಾರ, 22 ಆಗಸ್ಟ್ 2021 (17:06 IST)
ಕಾಲು ಜಾರಿ ನದಿಗೆ ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರ ಬಳಿ ಸಂಭವಿಸಿದೆ.

ಮಲ್ಲಪ್ರಭಾ ನದಿಯಲ್ಲಿ ಪತಿ ವಿಶ್ವನಾಥ (40), ಪತ್ನಿ ಶ್ರೀದೇವಿ (32) ಮತ್ತು ಮಗಳು ನಂದಿನಿ (12) ಮೃತ ರ್ದುದೈವಿಗಳು.
ಕಾಲು ಜಾರಿ ಒಬ್ಬರನ್ನೊಬ್ಬರು ರಕ್ಷಣೆ ಮಾಡೋ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಮೃತರು ಗುಳೇದಗುಡ್ಡ ತಾಲೂಕಿನ ಕೋಟೆಕಲ್ಲ್ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಶ್ರೀದೇವಿ ಶವ ಮಾತ್ರ ಪತ್ತೆಯಾಗಿದ್ದು, ಪತಿ ವಿಶ್ವನಾಥ ಮತ್ತು ಮಗಳು ನಂದಿನಿ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿಶೋಧ ಕಾರ್ಯ ನಡೆಸಿದೆ.
ಹುಣ್ಣಿಮೆ ಹಾಗೂ ರಕ್ಷಾ ಬಂಧನ‌ ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೇತ್ರವಾಗಿರುವ ಶಿವಯೋಗಿ ಮಂದಿರಕ್ಕೆ ಆಗಮಿಸಿದ್ದ ಕುಟುಂಬ ಉಪಹಾರ ಸೇವಿಸುವ ಮುನ್ನ ನೀರಿಗೆ ಇಳಿದಾಗ ಕಾಲು ಜಾರಿ ಬಿದ್ದಿದ್ದಾರೆ. ಒಬ್ಬರಿಗೆ ಮತ್ತೊಬ್ಬರು ರಕ್ಷಣೆ ಮಾಡುವ ಭರದಲ್ಲಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ