ಅಮಿತ್ ಶಾ ಭೇಟಿಗೆ ಸಮಯ ನಿಗದಿ; ಇಂದೇ ನಿರ್ಧಾರವಾಗುತ್ತಾ ಸಚಿವ ಸಂಪುಟ ವಿಸ್ತರಣೆ
ಶನಿವಾರ, 18 ಜನವರಿ 2020 (10:13 IST)
ಬೆಂಗಳೂರು : ಇಂದು ರಾಜ್ಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಅಮಿತ್ ಶಾ ಭೇಟಿಗೆ ರಾಜ್ಯ ನಾಯಕರಿಗೆ ಸಮಯ ನಿಗದಿಯಾಗಿದೆ.
ಇಂದು ಸಂಜೆ 6.30ರಿಂದ 7.30ರವರೆಗೆ ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿದ್ದು, ಕೇವಲ 1 ಗಂಟೆ ಸಮಯ ಮಾತ್ರ ಅಮಿತ್ ಶಾ ಭೇಟಿಗೆ ನೀಡಿದ ಹಿನ್ನಲೆಯಲ್ಲಿ ಒಂದು ಗಂಟೆ ಅವಧಿಯಲ್ಲಿ ಸಚಿವ ಸಂಪುಟದ ಬಗ್ಗೆ ಅಂತಿಮ ತೀರ್ಮಾನ ಅಸಾಧ್ಯ. ರಾಜ್ಯದಲ್ಲಿಯೇ ಎಲ್ಲವೂ ಬಗೆಹರಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಎಷ್ಟು ಜನರಿಗೆ ಮಂತ್ರಿ ಸ್ಥಾನ ಕೊಡಬೇಕು ಅನ್ನೋ ಗೊಂದಲ, ಸೋತವರಿಗೆ ಏನು ಮಾಡುವುದು ಅನ್ನೋ ವಿಚಾರ, ಎಂಎಲ್ ಸಿ ಮಾಡಬೇಕು ಬಳಿಕ ಮಂತ್ರಿ ಮಾಡಬೇಕಾ ಎಂಬ ಎಲ್ಲಾ ವಿಚಾರದ ಬಗ್ಗೆ ಚರ್ಚೆ ಮಾಡಲು 1 ಗಂಟೆ ಅವಧಿಯಲ್ಲಿ ಸಾಧ್ಯವಾಗದ ಕಾರಣ ಇಂದೇ ಸಚಿವ ಸಂಪುಟದ ಬಗ್ಗೆ ಅಂತಿಮ ತೀರ್ಮಾನ ಕಷ್ಟ ಎನ್ನಲಾಗಿದೆ. ಹಾಗೇ ಒಂದು ಗಂಟೆ ಅವಧಿಯಲ್ಲಿ ಈ ವಿವಾದ ಬಗೆಹರಿಯದಿದ್ದರೆ ಮತ್ತೆ ದೆಹಲಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತೆ ಎನ್ನಲಾಗಿದೆ.