ಪತ್ನಿ ಜೊತೆ ಡಿಕೆ ಶಿವಕುಮಾರ್ ಮತ್ತೆ ಟೆಂಪಲ್ ರನ್: ಸಿಎಂ ಆಗೇ ಆಗ್ತೀರಿ ಬಿಡಿ ಸರ್ ಎಂದ ಜನ

Krishnaveni K

ಗುರುವಾರ, 11 ಸೆಪ್ಟಂಬರ್ 2025 (09:24 IST)
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ನಿನ್ನೆ ಪತ್ನಿ ಉಷಾ ಜೊತೆ ಪಳನಿಯ ಅರುಳ್ಮಿಗು ದಂಡಾಯುಧಪಾಣಿ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಇದಕ್ಕೆ ಪಬ್ಲಿಕ್ ಕಾಮೆಂಟ್ ಮಾಡಿದ್ದು ಖಂಡಿತಾ ಸಿಎಂ ಆಗೇ ಆಗ್ತೀರಿ ಬಿಡಿ ಸರ್ ಎಂದಿದ್ದಾರೆ.

ಡಿಕೆ ಶಿವಕುಮಾರ್ ಆಗಾಗ ಪವರ್ ಫುಲ್ ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ. ಅವರ ಟೆಂಪಲ್ ರನ್ ಎಲ್ಲವೂ ಸಿಎಂ ಕುರ್ಚಿ ಪಡೆಯುವುದಕ್ಕಾಗಿ ಎಂದು ಹಲವರು ಕಾಮೆಂಟ್ ಮಾಡುತ್ತಾರೆ. ನಿನ್ನೆಯೂ ಪತ್ನಿ ಜೊತೆ ದೇವಸ್ಥಾನಕ್ಕೆ ಹೋಗಿದ್ದ ವಿಡಿಯೋ ಹಂಚಿಕೊಂಡಿದ್ದಕ್ಕೆ ನೆಟ್ಟಿಗರು ಇದೇ ರೀತಿ ಕಾಮೆಂಟ್ ಮಾಡಿದ್ದಾರೆ.

ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿಕೆಶಿಗೆ ದೇವರೇ ಆಶೀರ್ವಾದ ಮಾಡುತ್ತಾರೆ. ಮುಂದೆ ನೀವು ಸಿಎಂ ಆಗಿಯೇ ಆಗುತ್ತೀರಿ. ಆದರೆ ಸ್ವಲ್ಪ ಹಿಂದೂಗಳ ಬಗ್ಗೆಯೂ ಗಮನ ಹರಿಸಿ ಎಂದು ಕೆಲವರು ಸಲಹೆ ನೀಡಿದ್ದಾರೆ.

ದಂಡಾಯುಧಪಾಣಿ ಸ್ವಾಮಿ ಶಕ್ತಿಶಾಲೀ ದೇವರು. ಅವರ ಆಶೀರ್ವಾದ ಸಿಕ್ಕರೆ ನೀವು ಖಂಡಿತಾ ಸಿಎಂ ಆಗ್ತೀರಿ ಎಂದು ಜನ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಹಿಂದುತ್ವದ ಪರವಾಗಿಯೂ ನಿಲ್ಲಿ. ಆಗ ದೇವರೂ ಆಶೀರ್ವಾದ ಮಾಡುತ್ತಾನೆ ಎಂದು ಕೆಲವರು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ