ಪ್ರಜಾಪ್ರಭುತ್ವ ಅಪಾಯದತ್ತ: ಹೆಚ್ಡಿಡಿ

ಭಾನುವಾರ, 12 ಆಗಸ್ಟ್ 2018 (17:16 IST)
ಜನಪರ ಕಾಳಜಿ, ಪ್ರಾಮಾಣಿಕತೆ ಹಾಗೂ ಆದರ್ಶಗಳು ಅಲ್ಲದೇ ಬದ್ಧತೆಗಳನ್ನು ಸ್ವಾತಂತ್ರ್ಯನಂತರ ದೇಶದ ಸರಕಾರಗಳು ಆರಂಭದಲ್ಲಿ ಹೊಂದಿದ್ದವು. ಆದರೆ ಈಗೀಗ ಎ್ತ ಹೊರಟಿದ್ದೇವೆ ಎಂಬ ಗೊಂದಲ ಕಾಡುತ್ತಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾರತದ ಸಂಸತ್ ಒಂದು ಕಾರ್ಯನಿರತ ಪ್ರಜಾಪ್ರಭುತ್ವ ಎಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಪ್ರಸ್ತುತ ಪ್ರಜಾಪ್ರಭುತ್ವ ಅಪಾಯದತ್ತ ಸಾಗುತ್ತಿದೆ. ಜಾತಿಯತೆ, ಭಾಷಾ ಹಿಡಿತ, ಪ್ರಾದೇಶಿಕ ಪಕ್ಷಗಳ ಉಪಟಳಗಳ ನಡುವೆ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೆಚ್.ಡಿ.ದೇವೇಗೌಡರು ಹೇಳಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ