ನಟಿ ಹರಿಪ್ರಿಯಾ ಹೊಸ ಸಾಥ್ ನೀಡಿದ್ದು ಯಾರಿಗೆ?

ಭಾನುವಾರ, 18 ಆಗಸ್ಟ್ 2019 (20:09 IST)
ಚಿತ್ರನಟಿ ಹರಿಪ್ರಿಯ ಸಾಥ್ ನೀಡಿರೋ ವಿಷಯ ಈಗ ಸದ್ದು ಮಾಡಲಾರಂಭಿಸಿದೆ.

ಕಾವೇರಿ ನದಿಯನ್ನು ರಕ್ಷಣೆ ಮಾಡೋದಕ್ಕೋಸ್ಕರ ಹಾಗೂ ಅದನ್ನು ಉಳಿಸಿಕೊಳ್ಳುವುದಕ್ಕಾಗಿ ಶುರುಮಾಡಿರೋ ಕಾವೇರಿ ಕೂಗು ಆಂದೋಲನಕ್ಕೆ ನಟಿ ಹರಿಪ್ರಿಯಾ ಸಾಥ್ ನೀಡಿದ್ದಾರೆ.  

ಕಾವೇರಿ ನದಿಯನ್ನು ಸಂರಕ್ಷಿಸಲು ಅನೇಕ ಕ್ರಮ ಕೈಗೊಳ್ಳಬೇಕಿದೆ ಅಂದಿರೋ ನಟಿ ಹರಿಪ್ರಿಯಾ, ಇದಕ್ಕೆ ಅರಣ್ಯ ಹಾಳಾಗಿರೋದು ಸೇರಿದಂತೆ ಹಲವು ಕಾರಣಗಳಿವೆ ಅಂತ ತಿಳಿಸಿದ್ದಾರೆ.

ಕಾವೇರಿ ಕಾಲಿಂಗ್ ಅಥವಾ ಕಾವೇರಿ ಕೂಗು ಅಭಿಯಾನಕ್ಕೆ ನನ್ ಬೆಂಬಲವಿದೆ ಅಂತ ತಿಳಿಸಿರೋ ನಟಿ, ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನೀರಿನ ಬಳಕೆ ಮಾಡಬೇಕು. ಅಲ್ಲದೇ ಶುರುಮಾಡಿರೋ ಆಂದೋಲನಕ್ಕೆ ಬೆಂಬಲ ನೀಡುವಂತೆ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ