ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಟೊಮೆಟೊ ಯಥೇಚ್ಛವಾಗಿ ಬರುತ್ತಿದೆ. ಕಳೆದ ತಿಂಗಳು ಅಕಾಲಿಕ ಮಳೆಯಿಂದಾಗಿ ಬೆಳೆ ಬಂದರೂ ಮಳೆಗೆ ಸಿಲುಕಿ ಹಾಳಾಗಿತ್ತು. ಹೀಗಾಗಿ ಮಾರುಕಟ್ಟೆಗೆ ಬರುವ ಟೊಮೆಟೊ ಪೂರೈಕೆಯಲ್ಲಿ ಶೇ.60-70ರಷ್ಟು ಕುಸಿದಿತ್ತು. ತಮಿಳುನಾಡು, ಆಂಧ್ರ, ಕೇರಳ ಮತ್ತಿತರ ರಾಜ್ಯಗಳಲ್ಲೂ ಹಣ್ಣಿಗೆ ಕೊರತೆ ಉಂಟಾಗಿತ್ತು . ಅದೇ ವೇಳೆ ಮದುವೆ, ಗೃಹಪ್ರವೇಶ ಮತ್ತಿತರ ಶುಭ ಕಾರ್ಯಕ್ರಮಗಳು ಇದ್ದುದರಿಂದ ಬೇಡಿಕೆ ಹೆಚ್ಚಾಗಿತ್ತು 150 ರಿಂದ 160ರ ಗಡಿ ದಾಟಿತ್ತು. ಆದರೆ ಮಾರುಕಟ್ಟೆಯಲ್ಲಿ ಹಣ್ಣು ಸಿಗದೆ ಬೆಲೆಗಳು ಗಗನಕ್ಕೇರಿದ್ದವು. ಇದೀಗ ರಾಜ್ಯ ಹಾಗೂ ಹೊರ ರಾಜ್ಯದಲ್ಲೂ ಟೊಮೆಟೊ ಬರುತ್ತಿದ್ದು, ಬೆಲೆಗಳು ಅರ್ಧದಷ್ಟು ಇಳಿಕೆಯಾಗಿವೆ. ನಾಟಿ ಮತ್ತು ಫಾರಂ ಟೊಮೆಟೊ ಹಣ್ಣು ನ ಬೆಲೆ 40 ರೂ ಇದೆ. ಹೀಗೆ ಟೊಮೆಟೊ ಬೆಲೆ ಕಡಿಮೆ ಯಾಗುವ ಸಾದ್ಯತೆಗಳು ಇದೆ.