ವಿಡಿಯೋದಲ್ಲಿ ಬೆತ್ತಲಾದ ಟ್ರಾಫಿಕ್ ಪೊಲೀಸರ ಕರ್ಮಕಾಂಡ

ಬುಧವಾರ, 1 ಮೇ 2019 (18:24 IST)
ಟ್ರಾಫಿಕ್ ಪೊಲೀಸರ ಕರ್ಮಕಾಂಡ ಮತ್ತೆ ಬಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ದಾಖಲೆ ಪರಿಶೀಲನೆ ಹೆಸರಲ್ಲಿ ಹಣ ವಸೂಲಿ ಆರೋಪ ಕೇಳಿಬಂದಿದೆ. ಕಾರು ಚಾಲಕನನ್ನ ತಡೆದು ಹಣಕ್ಕಾಗಿ ಪೀಡಿಸಿದ್ದಾರೆ ಸಂಚಾರಿ ಪೊಲೀಸರು.

ಎಲ್ಲ‌ ದಾಖಲೆ ಸರಿ ಇದ್ದರೂ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಒಂದು ಸಾವಿರ ರೂಪಾಯಿ ನೀಡುವಂತೆ ಒತ್ತಾಯ ಮಾಡಿದ್ದಾರೆ ಪೊಲೀಸರು. ಆದರೆ ಹಣ ನೀಡಲು ನಿರಾಕರಿಸಿದ್ದಾನೆ ಕಾರು ಚಾಲಕ.

ಹೀಗಾಗಿ ಕಾರಿನ ದಾಖಲೆ ತೆಗೆದುಕೊಂಡು ಪೀಡಿಸಿದ್ದಾರೆ ಪೊಲೀಸರು.

ದಾಖಲೆ ನೀಡದಕ್ಕೆ ರಸ್ತೆಯಲ್ಲಿ ಪ್ರತಿಭಟಿಸಿದ್ದಾರೆ ಕಾರು ಚಾಲಕ ಹಾಗೂ ಆತನ ಕುಟುಂಬದವರು. ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಯಲ್ಲಿ ಘಟನೆ ನಡೆದಿದೆ.

ಚಿಕ್ಕಮಗುವನ್ನ ಕೈಯಲ್ಲಿ ಹಿಡಿದು ನಡು ರಸ್ತೆಯಲ್ಲಿ ಪ್ರತಿಭಟಿಸಿದೆ ಕುಟುಂಬ. ಪೊಲೀಸ್ ದೌರ್ಜನ್ಯ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ವಾಹನ ತಪಾಸಣೆ ಹೆಸರಲ್ಲಿ ಸುಲಿಗೆಗೆ ನಿಂತ ಪೊಲೀಸರ ಕ್ರಮಕ್ಕೆ ಖಂಡನೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಕಾರು ಚಾಲಕ‌ ಪ್ರತಿಭಟಿಸುತ್ತಿದ್ದಂತೆ ದಾಖಲೆ ನೀಡಿ‌ ಜಾಗ ಖಾಲಿ ಮಾಡಿದ್ದಾರೆ ಪೊಲೀಸರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ