ರಾಜ್ಯ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ - ಸಿಬ್ಬಂದಿಯ ನೋವು ಕೇಳೋರು ಯಾರು...?

geetha

ಶನಿವಾರ, 24 ಫೆಬ್ರವರಿ 2024 (14:00 IST)
ಬೆಂಗಳೂರು-ರಾಜ್ಯ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ವಿಚಾರವಾಗಿ ವರ್ಗಾವಣೆ ಸಿಗದೇ ನೊಂದ ಸಿಬ್ಬಂದಿಗಳು ದಯಾ ಮರಣ ಕೋರಿ  ರಾಷ್ಟ್ರಪತಿಗೆ  ಪತ್ರ ಬರೆದಿದ್ದಾರೆ.ಅಲ್ಲದೇ ವರ್ಗಾವಣೆ ಮಾಡಿ ಇಲ್ಲ ದಯಾ ಮರಣ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.ಇನ್ನೂ ಇದೇ ವಿಷಯವಾಗಿ ಪೊಲೀಸ್ ಮಹಾ ಸಂಘ ಅಧ್ಯಕ್ಷ ಶಶಿಧರ್ ವೇಣುಗೋಪಾಲ್  ಪ್ರತಿಕ್ರಿಯಿಸಿದ್ದು,ರಾಜ್ಯದ ಅನೇಕ ಠಾಣೆಗಳಲ್ಲಿ ಕೆಲಸ ಮಾಡೋ ಸಿಬ್ಬಂದಿಯಿಂದ  ಸಿಎಂ ಸಿದ್ದರಾಮಯ್ಯ ಹಾಗೂ ರಾಷ್ಟ್ರಪತಿಗೆ ಪತ್ರ ಬರೆಯಲಾಗಿದೆ.

ಹೆಂಡ್ತಿ ಒಂದು ಜಿಲ್ಲೆಯಲ್ಲಿ ವಾಸ,ಗಂಡ ಒಂದು ಜಿಲ್ಲೆಯಲ್ಲಿ ವಾಸ.ಅಂತರ ಜಿಲ್ಲಾ ವರ್ಗಾವಣೆ ಮಾಡದೇ ಮಕ್ಕಳಾಗುತ್ತಿಲ್ಲ.ಗಂಡ ಹೆಂಡತಿ ಜೊತೆಯಲ್ಲಿ ಇರೋದಕ್ಕೆ ಆಗುತ್ತಿಲ್ಲಇದರಿಂದ ವಿಚ್ಚೇದನ ಪ್ರಕರಣ ಕೂಡ ಹೆಚ್ಚುತ್ತಿವೆ.ಕೆಲ ಸಿಬ್ಬಂದಿ ವಯಸ್ಸಾದ ತಂದೆ ತಾಯಿ ನೋಡಿಕೊಳ್ಳಬೇಕಿದೆ.ಹೀಗಾಗಿ ವರ್ಗಾವಣೆ ಕೋರಿ ಮನವಿ ಮಾಡಿದ್ದಾರೆ.

ಸಿಎಂ ,ಗೃಹ ಇಲಾಖೆ ಮಂತ್ರಿಗಳು ಬಾಯಿ ಮಾತಿನಲ್ಲಿ ಹೇಳುತ್ತಾರೆ.ಆದರೆ ಅಂತರ ಜಿಲ್ಲಾ ವರ್ಗಾವಣೆ ಲಿಖಿತ ರೂಪದಲ್ಲಿ ಬರುತ್ತಿಲ್ಲ.ಪೊಲೀಸ್ ಇಲಾಖೆಯಲ್ಲಿ 2021 ರಿಂದಲ್ಲೂ ಯಾವುದೇ ವರ್ಗಾವಣೆ ಆಗಿಲ್ಲ.ಸುಪ್ರೀಂ ಕೋರ್ಟ್ ಆದೇಶದಂತೆ ಒಂದೇ ಘಟಕದಲ್ಲಿ ಪತಿ ಪತ್ನಿಗೆ ಕೆಲಸ ಮಾಡಲು ಅವಕಾಶ ಇದೆ.ಕೆಸಿಎಸ್ ಆರ್  ನಿಯಮದ ಪ್ರಕಾರ 3 ವರ್ಷ ಕಳೆದಿದ್ರೆ ವರ್ಗಾವಣೆ ಮಾಡಬೇಕು.ವರ್ಗಾವಣೆ ಮಾಡುತ್ತೇವೆ ಎಂದು ಮಾಧ್ಯಮಗಳ ಮುಂದೆ ಹೇಳ್ತಾರೇ ಆದರೆ ಯಾವುದೇ ವರ್ಗಾವಣೆ ಮಾಡದ ಕಾರಣ ಕುಟುಂಬಸ್ಥರಿಂದ ದೂರವೇ ಉಳಿಯುವಂತಾಗಿದೆ ಎಂದು ಪೊಲೀಸ್ ಮಹಾ ಸಂಘ ಅಧ್ಯಕ್ಷ ಶಶಿಧರ್ ವೇಣುಗೋಪಾಲ್  ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ