ಅರಣ್ಯ ಸಂರಕ್ಷಣೆ ಅಧಿಕಾರಿಗಳಿಂದಲೇ ಮರಗಳ ಹನನ

ಭಾನುವಾರ, 16 ಜನವರಿ 2022 (18:53 IST)
ಅರಣ್ಯ ಸಂರಕ್ಷಣೆ ಅಧಿಕಾರಿಗಳೇ ಮರಗಳನ್ನು ಹನನ ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿಯ ಸಾಮಾಜಿಕ ಅರಣ್ಯ ವಿಭಾಗದ ಉಪಾರಣ್ಯ ಸಂರಕ್ಷಣಾಧಿಕಾರಿಯಾದ ಹೆಚ್.ಪೂರ್ಣಿಮಾ ಎಂಬುವರಿಗೆ ವಾಸಮಾಡಲು ವಸತಿಗೃಹ ನಿರ್ಮಾಣಕ್ಕೆ ಮಡಿಕೇರಿ ಅರಣ್ಯ ಇಲಾಖೆಯಿಂದ ಸೂಚಿಸಲಾಗಿತ್ತು. ಇದಕ್ಕಾಗಿ 20 ವರ್ಷಗಳಿಂದ ದಟ್ಟವಾಗಿ ಬೆಳೆದ ಪೈನೆಸ್, ನಂದಿ, ಹೆಬ್ಬಲಸು ಮರಗಳನ್ನು ಸಾಮಾಜಿಕ ಅರಣ್ಯ ವಿಭಾಗದ ಉಪವಲಯ ಅಧಿಕಾರಿಯಾದ ಮಯೂರ  ಕರ್ವೆಕರ್ ಮುಂದಾಳತ್ವದಲ್ಲಿ ಕೆಡಿಸಿ ತಮಗೆ ಬೇಕಾದ ವಸತಿ ಗೃಹ ನಿರ್ಮಾಣ ಮಾಡಲು ಸ್ಥಳವನ್ನು ಸಿದ್ಧಪಡಿಸಿ ಕೊಂಡಿರುವುದಾಗಿ ವರದಿಯಾಗಿದೆ.
 ನ್ಯಾಷನಲ್ ಸೋಶಿಯಲ್ ಕ್ರೈo ಇನ್ಫಾರ್ಮೇಶನ್ ಬ್ಯೂರೋ ಸ್ಥಳಕ್ಕೆ ದಾಳಿ ಮಾಡಿ ಮಾಹಿತಿ ಕಲೆ ಹಾಕಿದಾಗ ಅಕ್ರಮವಾಗಿ ಮರಗಳನ್ನು ಕಡಿಯುತ್ತಿದ್ದವರನ್ನು ವಿಚಾರಿಸಿದಾಗ ಅಲ್ಲೇ ಇದ್ದ ಅಧಿಕಾರಿ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
 ಕಾಡು ಬೆಳೆಸಿ,ನಾಡು ಉಳಿಸಿ ಅನ್ನುವವರು ಈ ರೀತಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದಲ್ಲದೆ ದರ್ಪ ತೋರಿಸಿ ಕೆಲಸ ಪ್ರಾರಂಭಿಸಿದ್ದಾರೆ.
ಅಷ್ಟೇ ಅಲ್ಲದೆ ಅರಣ್ಯ ಇಲಾಖೆಯ ಕೆಲಸ ಕಾರ್ಯಕ್ಕಾಗಿ ಅರ್ಜಿ ಹಾಕಿದವರ ಅರ್ಜಿಯನ್ನು ತಿರಸ್ಕರಿಸಿದ್ದು ಸ್ವಂತ ಕೆಲಸಕ್ಕಾಗಿ ಮರಗಳನ್ನು ಮಾರಣಹೋಮ ಮಾಡುತ್ತಿದ್ದಾರೆ. ಮೇಲಾಧಿಕಾರಿಗಳು ಸೂಕ್ಷ್ಮವಾಗಿ ಪರಿಗಣಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ