ಟ್ರೆಕ್ಕಿಂಗ್ ಟ್ರೆಂಡ್ ಹವಾ ಜೋರು!

ಭಾನುವಾರ, 18 ನವೆಂಬರ್ 2018 (15:12 IST)
ಸಾಮಾನ್ಯವಾಗಿ ಟ್ರೆಕ್ಕಿಂಗ್ ಗೆ ಐದಾರು ಜನರೋ ಅಥವಾ ಎಂಟ್ಹತ್ತು ಜನರೋ ಹೋಗೋದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಬರೋಬ್ಬರಿ ನೂರಕ್ಕೂ ಹೆಚ್ಚು ಜನರು ಟ್ರೆಕ್ಕಿಂಗ್ ನಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.

ಗದಗ್‍ನಲ್ಲಿ ನಡೆದ ಟ್ರೆಕ್ಕಿಂಗ್‍ನಲ್ಲಿ ಬರೋಬ್ಬರಿ 100 ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಮೂಲಕ ಟ್ರೆಕ್ಕಿಂಗ್ ಹವ್ಯಾಸವನ್ನು ಇನ್ನಷ್ಟು ಜನರು ರೂಢಿಸಿಕೊಳ್ಳಲು ಪ್ರೇರಣೆಯಾಗುತ್ತಿದ್ದಾರೆ. 

ಆಧುನಿಕ ಬದುಕಿನ ಒತ್ತಡದಲ್ಲಿ ಮನುಷ್ಯ ದೈಹಿಕ ಶ್ರಮವನ್ನು ಮರೆತಿದ್ದಾನೆ. ಇದರಿಂದಾಗಿ ದೇಹ ರೋಗದ ಗೂಡಾಗುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಜನರು ವ್ಯಾಯಮ, ಜಿಮ್ ಸೇರಿದಂತೆ ಅನೇಕ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಅದರ ಮತ್ತೊಂದು ಭಾಗವೆಂಬಂತೆ ಈ ಟ್ರೆಕ್ಕಿಂಗ್ ಹವ್ಯಾಸ. ಈ ಹವ್ಯಾಸ ಕೇವಲ ಅಲ್ಲೊಬ್ಬರು ಇಲ್ಲೊಬ್ಬರು ಎಂಬಂತೆ ಕಂಡು ಬರುತ್ತಿದೆ. ಆದರೆ ಗದಗದಲ್ಲಿ ಸಾಮೂಹಿಕ ಟ್ರೆಕ್ಕಿಂಗ್‍ಗೆ ಅಕ್ಕಿ ಜಿಮ್ಸ್ ಗ್ರೂಪ್  ರೂವಾರಿಯಾಗಿದೆ. ಗದಗ ನಗರದ ಅಕ್ಕಿ ಜಿಮ್ಸ್‍ನಿಂದ ಗದಗ್‍ನಿಂದ 100 ಕ್ಕೂ ಹೆಚ್ಚು ಜನರು ಗದಗದ ಸುತ್ತಮುತ್ತ ಇರುವ ಅಸುಂಡಿ, ಬಿಂಕದಕಟ್ಟಿ ಬೆಟ್ಟದನ್ನು ಏರುವ ಮೂಲಕ ಖುಷಿಪಟ್ಟರು.

ಸುಮಾರು 25 ಕ್ಕೂ ಹೆಚ್ಚು ಕಿ.ಮೀ. ನಷ್ಟು ದೂರದಲ್ಲಿ ಈ ಜನರು ಕ್ರಮಿಸಿದರು. ಟ್ರೆಕ್ಕಿಂಗ್‍ನಲ್ಲಿ ಪಾಲ್ಗೊಂಡಿದ್ದ 100 ಕ್ಕೂ ಹೆಚ್ಚು ಜನರಲ್ಲಿ ಸುಮಾರು 40 ಕ್ಕೂ ಹೆಚ್ಚು ಜನರು ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೆಳ್ಳಂ ಬೆಳಗಿನ ವಾತಾವರಣದಲ್ಲಿ ಬೆಟ್ಟ ಏರುವುದು ಅಂದ್ರೆ ಅದೊಂದು ರೀತಿಯಲ್ಲಿ ಮಜಾ ನೀಡಿತು ಎಂದು ಟ್ರೆಕ್ಕಿಂಗ್‍ನಲ್ಲಿ ಪಾಲ್ಗೊಂಡಿದ್ದವರು ಖುಷಿ ಹಂಚಿಕೊಂಡರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ