ಮಂಗಳೂರು ವಿಮಾನ ನಿಲ್ದಾಣದಲ್ಲಿ 9 ಲಕ್ಷದ ವಿದೇಶಿ ಕರೆನ್ಸಿ ಹೊಂದಿದ್ದ ಇಬ್ಬರು ಅರೆಸ್ಟ್‌

Sampriya

ಶನಿವಾರ, 12 ಜುಲೈ 2025 (19:41 IST)
Photo Credit X
ಮಂಗಳೂರು: ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ಹೊಂದಿದ್ದ ಇಬ್ಬರನ್ನು ಕಸ್ಟಮ್ಸ್‌ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಜು.11ರಂದು ಬಂಧಿಸಿದ್ದಾರೆ.

ಬಂಧಿತರನ್ನು ತೌಸಿಫ್ ಅಹಮ್ಮದ್‌ ಮತ್ತು ಮೋತಿಯಾ ಖೈರುನ್ನಿಸಾ ಎಂದು ಗುರುತಿಸಲಾಗಿದೆ. 

ಅವರು ಜು.11ರಂದು ರಾತ್ರಿ 9.25ರ ಇಂಡಿಗೋ ವಿಮಾನದಲ್ಲಿ ಅಬುಧಾಬಿಗೆಂದು ಹೊರಟಿದ್ದರು. ಅವರನ್ನು ತಪಾಸಣೆ ನಡೆಸುವಾಗ
ಅವರ ಬಳಿ 40,000 ಸೌದಿ ಅರೇಬಿಯನ್‌ ರಿಯಲ್‌ (ಅಂದಾಜು 9,74,600) ರೂ. ಇತ್ತು. ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ