ಆಗ್ಲಿ ಇಂಡಿಯನ್ ಸಂಸ್ಥೆ 500 ಕಿ. ಮಿ. ಬೆಂಗಳೂರು ಸ್ವಚ್ಛತೆ

ಶನಿವಾರ, 12 ಫೆಬ್ರವರಿ 2022 (17:40 IST)
ನಗರದ ರಸ್ತೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು ಮತ್ತು ಜನರಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸಲು, ಬೆಂಗಳೂರಿನ ಅಗ್ಲಿ ಇಂಡಿಯನ್(Ugly Indian) ತಂಡವು ಮಹದೇವಪುರ ಕ್ಷೇತ್ರದಲ್ಲಿ 500 ಕಿಲೋ ಮೀಟರ್ ಸವಾಲನ್ನು ಆರಂಭಿಸಿದ್ದಾರೆ.
ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಸರಳ ತಂತ್ರಜ್ಞಾನಗಳನ್ನು ಬಳಸಿಕೊಂಡು, 500 ಕಿಲೋ ಮೀಟರ್ ವರೆಗೆ ನಗರದ ರಸ್ತೆಗಳನ್ನು ಗೂಗಲ್ ಮ್ಯಾಪ್ ಮಾಡಲಾಗುತ್ತಿದೆ. ಪ್ರತಿ ವಾರ್ಡ್‌ನಲ್ಲಿ, 20-30 ಕಿಲೋಮೀಟರ್ ಮುಖ್ಯ ರಸ್ತೆಗಳನ್ನು ಪಟ್ಟಿಗೆ ತೆಗೆದುಕೊಳ್ಳಲಾಗಿದ್ದು, ವಿವರಗಳನ್ನು ಶೀಘ್ರದಲ್ಲೇ ಸಾರ್ವಜನಿಕ ಪರಿಶೀಲನೆ ಮತ್ತು ರೇಟಿಂಗ್‌ಗಾಗಿ ತೆರೆಯಲಾಗುವುದು ಎಂದು ಸಂಸ್ಥೆ ತಿಳಿಸಿದೆ.
 
ಅಗ್ಲಿ ಇಂಡಿಯನ್ ತಂಡ ಸದ್ಯಕ್ಕೆ ಬೆಂಗಳೂರಿನ ರಸ್ತೆಗಳನ್ನು ನಗರ ವ್ಯಾಪ್ತಿಯಲ್ಲಿ ಮ್ಯಾಪ್ ಮಾಡಿದ್ದು, ಕ್ರಮೇಣ ರಿಂಗ್ ರೋಡ್‌ನ ಆಚೆಗೂ ವಿಸ್ತರಿಸಲಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಗರವು ಸ್ವಚ್ಛವಾಗಿರುವುದನ್ನು ನಾವು ನೋಡಿದ್ದೇವೆ. ಈಗ ಅದನ್ನು ನಿರ್ವಹಿಸುವುದು ಮುಖ್ಯವಾಗಿದೆ. ನಗರದ ಸಮಸ್ಯೆಯನ್ನು ಸರಿಪಡಿಸಲು ಅಥವಾ ಬೇರೊಬ್ಬರ ಮೇಲೆ ಅವಲಂಬಿತವಾಗಿರುವ ಸಿದ್ಧಾಂತದಿಂದ ನಾವು ದೂರ ಸರಿಯುವ ಸಮಯ ಇದು. ಇದು ಸರ್ಕಾರಿ ಅಧಿಕಾರಿಗಳ ಮೇಲೆ ಒಂದು ರೀತಿಯ ಒತ್ತಡವನ್ನು ಉಂಟುಮಾಡುತ್ತದೆ, ರಸ್ತೆಗಳನ್ನು, ನಗರವನ್ನು ಯಾರೋ ಗಮನಿಸುತ್ತಿರುತ್ತಾರೆ ಎಂಬ ಭಾವನೆ ಸರ್ಕಾರದ ಅಧಿಕಾರಿಗಳಿಗೆ ಬರುತ್ತದೆ ಎಂದು ಅಗ್ಲಿ ಇಂಡಿಯನ್ ತಂಡದ ಸದಸ್ಯರೊಬ್ಬರು ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ