ಕೊರೊನಾ ಸೋಂಕಿತರು ಟ್ರಾವೆಲ್ ಹಿಸ್ಟರಿ ಹೇಳದಿದ್ದರೆ ಹೀಗೆ ಆಗೋದು
ಕೊರೊನಾ ಸೋಂಕಿತರು ತಮ್ಮ ಟ್ರಾವೆಲ್ ಹಿಸ್ಟರಿ ಸರಿಯಾಗಿ ಹೇಳದಿರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಹೀಗಂತ ಕುಮಟಾ ಉಪವಿಭಾಗಾಧಿಕಾರಿ ಅಜಿತ್ ಎಂ. ಎಚ್ಚರಿಸಿದ್ದಾರೆ.
ಕುಮಟಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಸೋಂಕಿತರ ಟ್ರಾವೆಲ್ ಹಿಸ್ಟರಿ ಸಮರ್ಪಕವಾಗಿ ದೊರೆಯದೇ ಇರುವುದು ಮೂಲ ಕಾರಣವಾಗಿದೆ. ಇನ್ನು ಮುಂದೆ ಕೊರೊನಾ ತಡೆಯಲು ಕುಮಟಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇವೆ.
ಸೋಂಕಿತ ವ್ಯಕ್ತಿಗಳು ತಮ್ಮ ಟ್ರಾವೆಲ್ ಹಿಸ್ಟರಿಯನ್ನು ಸಮರ್ಪಕವಾಗಿ ನೀಡದೇ ಸೋಂಕು ಇನ್ನಷ್ಟು ಜನರಿಗೆ ಹರಡುವಂತಾದರೆ ಅಂಥ ಸೋಂಕಿತನನ್ನು ಗುರುತಿಸಿ, ಆತ ಗುಣಮುಖನಾದ ಮೇಲೆ ಅವನ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.