ಡಿಕೆ ಶಿವಕುಮಾರ್ ಎಲ್ಲಾ ಮಾಡುತ್ತಿರುವುದು ಮುಖ್ಯಮಂತ್ರಿ ಪಟ್ಟಕ್ಕಾಗಿ ಎಂದ ಸೋಮಣ್ಣ
ಪ್ರಜ್ವಲ್ ವಿಡಿಯೋ ರಿಲೀಸ್ ಮಾಡಲು ಡಿಕೆ ಶಿವಕುಮಾರ್ ಕುಮ್ಮಕ್ಕು ಕಾರಣ ಎಂಬ ಆರೋಪವಿದೆ. ಈ ಬಗ್ಗೆ ಇಂದು ಮಾಜಿ ಸಚಿವ, ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡಿಕೆ ಶಿವಕುಮಾರ್ ಇಷ್ಟೆಲ್ಲಾ ಮಾಡುತ್ತಿರುವುದು ಸಿಎಂ ಕುರ್ಚಿ ಮೇಲಿನ ಆಸೆಯಿಂದ. ಅವರು ಮುಖ್ಯಮಂತ್ರಿಯಾಗಲಿ ಎಂದು ನನಗೂ ಆಸೆಯಿತ್ತು. ಆದರೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಇಷ್ಟೆಲ್ಲಾ ದುಡುಕುವುದು ಬೇಡ ಎಂದು ಸೋಮಣ್ಣ ಟಾಂಗ್ ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ, ಸಿಂಧ್ಯಾ ಮುಂತಾದವರೆಲ್ಲಾ ರಾಜಕೀಯಣದಲ್ಲಿ ಸಂಸ್ಕಾರವನ್ನು ಕಲಿತಿದ್ದೇ ದೇವೇಗೌಡರಿಂದ. ಪ್ರಜ್ವಲ್ ದೇವೇಗೌಡರ ಮೊಮ್ಮಗ ಎಂಬ ಕಾರಣಕ್ಕೆ ಅವರು ತಪ್ಪು ಮಾಡಿದರೂ ರಿಯಾಯಿತಿ ತೋರುವುದು ಬೇಡ. ಅವರು ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ ಎಂದರು.