ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯಲ್ಲಿ ನಡೆದಿದ್ದ ವೈದ್ಯೆ ಮೇಲಿನ ರೇಪ್ ಆಂಡ್ ಮರ್ಡರ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಟೀಂ ಕೆಲವು ಮಹತ್ವದ ಅಂಶಗಳನ್ನು ಕಂಡುಕೊಂಡಿದೆ.
ಟ್ರೈನಿ ವೈದ್ಯೆ ಮೇಲೆ ಆರ್ ಜಿ ಕರ್ ಆಸ್ಪತ್ರೆಯ ಸೆಮಿನಾರ್ ನಲ್ಲೇ ರೇಪ್ ಮಾಡಿ ಕ್ರೂರವಾಗಿ ಮರ್ಡರ್ ಮಾಡಲಾಗಿತ್ತು. ಆಕೆಯ ಮೇಲೆ ನಡೆದ ಕೃತ್ಯ ಗಮನಿಸಿ ಇದು ಕೇವಲ ಒಬ್ಬ ಮಾಡಿರುವ ಕೆಲಸವಲ್ಲ ಎಂದು ಪೋಷಕರು ಆರೋಪಿಸಿದ್ದರು. ಆದರೆ ಈಗ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಇದು ಗ್ಯಾಂಗ್ ರೇಪ್ ಅಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.
ಡಿಎನ್ ಎ ಪರೀಕ್ಷೆ ವರದಿಗಳ ಆಧಾರದಲ್ಲಿ ಸಿಬಿಐ ಅಧಿಕಾರಿಗಳು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದರೆ ಗ್ಯಾಂಗ್ ರೇಪ್ ಅಲ್ಲ ಎಂಬ ಅಂತಿಮ ತೀರ್ಮಾನಕ್ಕೆ ಅಧಿಕಾರಿಗಳು ಇನ್ನೂ ಬಂದಿಲ್ಲ. ಆ ಸಾಧ್ಯತೆಗಳ ಬಗ್ಗೆ ಇನ್ನಷ್ಟು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ಫಾರೆನ್ಸಿಕ್ ವರದಿ ಬಂದ ಬಳಿಕವಷ್ಟೇ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.
ಹೀಗಾಗಿ ಈಗಿನ ವರದಿ ಪ್ರಕಾರ ಸಂಜಯ್ ರಾಯ್ ಒಬ್ಬನೇ ಈ ಕೃತ್ಯವೆಸಗಿರಬಹುದು ಎನ್ನಲಾಗಿದೆ. ಮೃತದೇಹದ ಪಕ್ಕ ಆತನ ಬ್ಲೂಟೂತ್ ಹೆಡ್ ಸೆಟ್ ಕೂಡಾ ಪತ್ತೆಯಾಗಿತ್ತು. ಅಲ್ಲದೆ ಆತ ಸೆಮಿನಾರ್ ಹಾಲ್ ನ ಒಳಗೆ ಹೋಗುವ ಮತ್ತು ಹೊರಬರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿತ್ತು.