ವಾಸ್ತು ಗುರೂಜಿ ಕೊಲೆಗೆ ರೋಚಕ ಟ್ವಿಸ್ಟ್

ಸೋಮವಾರ, 10 ಅಕ್ಟೋಬರ್ 2022 (14:30 IST)
ಚಂದ್ರಶೇಖರ್ ಗುರೂಜಿ ಹತ್ಯೆಗೆ ಪ್ರಮುಖ ಕಾರಣ ಬೇನಾಮಿ ಆಸ್ತಿ ಮಾರಟವಾಗಿದ್ದು, ಗುರೂಜಿಗೆ ತಿಳಿಯದಂತೆ ಆರೋಪಿಗಳು ಬೇನಾಮಿ ಜಮೀನು ಮಾರಾಟ ಮಾಡಿರುವುದರಿಂದ ಹುಟ್ಟಿಕೊಂಡ ದ್ವೇಷ ಗುರೂಜಿ ಹತ್ಯೆಯಲ್ಲಿ ಕೊನೆಯಾಗಿದೆ.
ಬೇನಾಮಿ ಆಸ್ತಿ ಮಾರಾಟ ಮಾಡಿಸಲು ಮುಂದಾದವರು ಓರ್ವ ಕಾಂಗ್ರೆಸ್ ಮುಖಂಡ ಅಂತ ಈಗ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೇ ಇದು ಕೇವಲ ಜಮೀನು ಮಾರಾಟ ಅಲ್ಲ, ಗುರೂಜಿ ಕೊಲೆ ಸುಪಾರಿಗೆ ತಳುಕು ಹಾಕಿಕೊಂಡಿದೆ. ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಇದರ ಪ್ರಮುಖ ರೂವಾರಿ ಎಂಬುದು ತಿಳಿದುಬಂದಿದೆ.
 
ದೀಪಕ್ ಚಿಂಚೋರೆ ತನ್ನ ಆಪ್ತ ತಾನಾಜಿ ಶಿರ್ಕೆಗೆ, ಹಂತಕರಿಗೆ ಒಂದಿಷ್ಟು ಹಣ ಅಡ್ವಾನ್ಸ್ ಕೊಟ್ಟು ಗುರೂಜಿ ಬೇನಾಮಿ ಆಸ್ತಿ ಕೊಡಿಸಿದ್ದರು. ರಿಜಿಸ್ಟ್ರೇಷನ್ ಬಳಿಕ ಪೂರ್ತಿ ಹಣ ನೀಡುವ ಮಾತುಕತೆಯಾಗಿತ್ತು. ಇಷ್ಟೊತ್ತಿಗಾಗಲೇ ಈ ವಿಚಾರ ತಿಳಿದು ಗುರೂಜಿ ಮತ್ತು ಕುಟುಂಬಸ್ಥರು ಈ ಬಗ್ಗೆ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದರು. ಇದರಿಂದಾಗಿ ಆಸ್ತಿ ಮಾರಾಟದ ಬಳಿಕ ಬರಬೇಕಿದ್ದ ಪೂರ್ತಿ ಹಣ ಹಂತಕರ ಕೈಗೆ ತಲುಪಿರಲಿಲ್ಲ. ಅಲ್ಲದೆ ಆಸ್ತಿ ಖರೀದಿಸಿದ್ದ ದೀಪಕ್ ಚಿಂಚೋರೆ, ಕೋರ್ಟ್ ಕೇಸ್ ಪರಿಹರಿಸಿ ಕೊಡಿ, ಇಲ್ಲದಿದ್ದರೆ ಹಣ ಮರಳಿ ಕೊಡುವಂತೆ ಒತ್ತಡ ಸಹ ಹಾಕಿದ್ದರು. ಇದರಿಂದಾಗಿ ಆರೋಪಿಗಳು ದೀಪಕ್ ಚಿಂಚೋರೆ ಮೇಲೂ ಸಹ ಅಸಮಾಧಾನ ಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ