ರೈತ ಮುಖಂಡರಿಂದ 26 ಕ್ಕೆ ವಿಧಾನಸೌಧ ಚಲೋ ಕಾರ್ಯಕ್ರಮ

ಭಾನುವಾರ, 18 ಸೆಪ್ಟಂಬರ್ 2022 (20:56 IST)
ರೈತ ಮುಖಂಡರ ಸಭೆಯನ್ನ ರೈತ ಮುಖಂಡ ಕುರುಬೂರು ಶಾಂತಕುಮಾರ್ಪ ಟ್ಟಣದ ಎಪಿಎಂಸಿ ಕಚೇರಿಯಲ್ಲಿ ನಡೆಸಿದ್ದಾರೆ.
26ಕ್ಕೆ ವಿಧಾನಸೌಧ ಚಲೋ ಇರುವುದರಿಂದ ಕಬ್ಬಿನ ದರ,ಕೃಷಿ ಪಂಪ್ ಸೆಟ್ ಮೇಲಿನ ದರ,ರಸಗೊಬ್ಬರಗಳ ಮೇಲಿನ ದರ ಇಳಿಸುವಂತೆ ಆಗ್ರಹಿಸಿಸುತ್ತಿದ್ದಾರೆ. 
 
ಪ್ರಧಾನಿ ಮೋದಿಯವರು 2022ಕ್ಕೆ ರೈತರ ಆದಾಯವನ್ನ ಡಬಲ್ ಮಾಡುತ್ತೇನೆ ಎಂದಿದ್ದರು.ಆದರೆ ರೈತರು ದಿನನಿತ್ಯ ಬಳಸುವ ರಸಗೊಬ್ಬರ ಬೆಲೆ ಏರಿಕೆ ಮಾಡಿದ್ದಾರೆ.ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ಹೋರಾಟ ನಡೆಸಿದಾಗ ರೈತ ವಿರೋಧಿ ಕೃಷಿ ಕಾಯ್ದೆಯನ್ನ ವಾಪಾಸ್ ಪಡೆದರು.ರಾಜ್ಯದಲ್ಲಿಯು ಎಪಿಎಂಸಿ ಕಾಯ್ದೆಯನ್ನ ವಾಪಾಸ್ ಪಡೆಯಬೇಕು.ನೆರೆ ಹಾನಿಯಿಂದ ರಾಜ್ಯದಲ್ಲಿ 10ಲಕ್ಷ ಎಕರೆ ಬೆಳೆ ಹಾನಿಯಾಗಿದೆ.ಸರ್ಕಾರ ರೈತರಿಗೆ ಕಾಟಾಚಾರಕ್ಕೆ ಪರಿಹಾರ ನೀಡುತ್ತಿದ್ದಾರೆ.ಮುಂದಿನ ದಿನಗಳಲ್ಲಿ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಚೆಕ್ ಸುಡುವ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ರೈತರಿಗೆ ನೀಡಿರುವ ಮಾತನ್ನ ಉಳಿಸಿಕೊಳ್ಳಬೇಕು.ಸೆಪ್ಟೆಂಬರ್ 26ಕ್ಕೆ ಬೆಂಗಳೂರಲ್ಲಿ ರೈತರಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸುತ್ತೇವೆ.ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನ ಎಚ್ಚರಿಸುವ ಕೆಲಸವನ್ನ ರೈತರು ಮಾಡುತ್ತೇವೆ ಎಂದು ರೈತರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ