ಜಂಬೂಸವಾರಿ ವೇಳೆ ಹಳೆಯ ಕಟ್ಟಡ ಮೇಲಿಂದ ವೀಕ್ಷಣೆ ನಿಷೇಧ
ಮೈಸೂರು: ನಾಳೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ಪ್ರಮುಖ ಆಕರ್ಷಣೆ ಸವಾರಿ ಸಹ ನಾಳೆಯೇ ನಡೆಯಲಿದೆ. ಆದರೆ ಈ ಬಾರಿ ಪಾರಂಪರಿಕ ಕಟ್ಟಡದ ಮೇಲಿಂದ ಮೆರವಣಿಗೆ ವೀಕ್ಷಣೆಗೆ ಅವಕಾಶ ನಿಷೇಧಿಸಲಾಗಿದೆ.
ಮೆರವಣಿಗೆ ಸಯ್ಯಾಜಿರಾವ್ ರಸ್ತೆ ಮೂಲಕ ಸಾಗಲಿದ್ದು, ರಸ್ತೆಯ ಎರಡೂ ಬದಿಯಲ್ಲಿ ಹಲವು ಪುರಾತನ ಕಟ್ಟಡಗಳಿವೆ. ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂಬ ದೃಷ್ಟಿಯಿಂದ ಕಟ್ಟಡ ಹತ್ತುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.